

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ರುಚಿ ಇದೆ ಎಂದು ಹೆಚ್ಚು ಸೇವಿಸಬಾರದು. ಅದನ್ನು ಮಿತವಾಗಿ ಸೇವಿಸಬೇಕು. ಇನ್ನು ಮಾರುಕಟ್ಟೆಗಳಲ್ಲಿ ಅಥವಾ ಅಂಗಡಿಗಳಲ್ಲಿ ಬಳಸುವ ಹಪ್ಪಳಗಳನ್ನು ಬಳಸುವುದಕ್ಕಿಂತ ಮನೆಯಲ್ಲೇ ತಯಾರಿಸಿ. ಅದು ಆರೋಗ್ಯಕರವಾಗಿಯು ಇರುತ್ತದೆ.
ಹಪ್ಪಳಗಳು ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸೋಡಿಯಂ ಆಧಾರಿತ ಸಂರಕ್ಷಕಗಳನ್ನು ಹೊಂದಿರುತ್ತವೆ. ಹೆಚ್ಚುವರಿ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಅಸ್ವಸ್ಥತೆಗಳು ಮತ್ತು ಹೃದಯ ಕಾಯಿಲೆಗಳಿಗೆ ಸಂಬಂಧಿಸಿದೆ. ಹೆಚ್ಚಿನ ಸೋಡಿಯಂ ಮಟ್ಟವನ್ನು ಹೊಂದಿರುವ ಸಂಸ್ಕರಿಸಿದ ಆಹಾರಗಳು ದೀರ್ಘಕಾಲೀನ ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದು
ಹಪ್ಪಳಗಳನ್ನು ಪ್ಯಾಕ್ ಮಾಡಿ ಮಾರುಕಟ್ಟೆಗಳಿಗೆ ನೀಡುತ್ತಾರೆ. ಅದರ ಸುವಾಸನೆ ಹೋಗಬಾರದು ಎಂದು ಕೃತಕ ಸುವಾಸನೆ ಮತ್ತು ಸಂರಕ್ಷಕಗಳನ್ನು ಹಾಕುತ್ತಾರೆ. ಇದು ಜೀರ್ಣಕ್ರಿಯೆ ಸಮಸ್ಯೆ ಹಾಗೂ ಆಮ್ಲೀಯತೆಗೆ ಕಾರಣವಾಗಬಹುದು. ಇದರ ಜತೆಗೆ ಸೋಡಿಯಂ ಲವಣಗಳನ್ನು ಹೆಚ್ಚಾಗಿ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
ಒಂದು ಹಪ್ಪಳ 13 ಗ್ರಾಂ ಪೌಷ್ಟಿಕಾಂಶ ಹೊಂದಿರುತ್ತದೆ. 35-40 ಕೆ.ಸಿ.ಎಲ್ ಕ್ಯಾಲೋರಿ ಹೊಂದಿದ್ದು, 0.42 ಗ್ರಾಂ ಕೊಬ್ಬು ಇರುತ್ತದೆ. 7.8 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಒಳಗೊಂಡಿದೆ. 226 ಮಿಗ್ರಾಂ ಸೋಡಿಯಂ ಇದೆ. ಇವುಗಳನ್ನು ನೋಡಿದಾಗ ಇದನ್ನು ವಾರದಲ್ಲಿ ಅಥವಾ ಅಪರೂಪಕ್ಕೆ ಸೇವಿಸುವುದು ಉತ್ತಮವಾಗಿರುತ್ತದೆ.