ಮೂರು ತಿಂಗಳ ಬಳಿಕ ಕಣಕ್ಕಿಳಿದ ರಿಷಭ್​ ಪಂತ್​ಗೆ ನಿರಾಸೆ; ಹಿನ್ನಡೆ ಕಂಡ ಭಾರತ ಎ

web pant
Published on

ಬೆಂಗಳೂರು: ಯುವ ಬ್ಯಾಟರ್​ ಆಯುಷ್​ ಮಹಾತ್ರೆ (65) ಅರ್ಧಶತಕದ ಹೋರಾಟದ ನಡುವೆಯೂ ಭಾರತ ಎ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಚತುರ್ದಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್​ ಹಿನ್ನಡೆ ಅನುಭವಿಸಿದೆ.

ಉದ್ಯಾನನಗರಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 9 ವಿಕೆಟ್​ಗೆ 299 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ದ. ಆಫ್ರಿಕಾ ಎ ತಂಡ 309 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಭಾರತ ಎ ತಂಡ ಸ್ಪಿನ್ನರ್​ ಪ್ರೆನೆಲನ್​ ಸುಬ್ರಯೆನ್​ (61ಕ್ಕೆ 5) ದಾಳಿಗೆ ಕುಸಿದು 234 ರನ್​ಗಳಿಗೆ ಆಲೌಟ್​ ಆಗಿ 75 ರನ್​ ಮುನ್ನಡೆ ಬಿಟ್ಟುಕೊಟ್ಟಿತು. ಗಾಯದಿಂದ ಚೇತರಿಸಿಕೊಂಡು ಸುಮಾರು 3 ತಿಂಗಳ ಬಳಿಕ ಕಣಕ್ಕಿಳಿದ ನಾಯಕ ರಿಷಭ್​ ಪಂತ್​ 17 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ದಿನದಂತ್ಯಕ್ಕೆ ದ. ಆಫ್ರಿಕಾ ಎ ವಿಕೆಟ್​ ನಷ್ಟವಿಲ್ಲದೆ 30 ರನ್​ ಗಳಿಸಿ ಒಟ್ಟು 105 ರನ್​ ಮುನ್ನಡೆಯಲ್ಲಿದೆ.

ದಕ್ಷಿಣ ಆಫ್ರಿಕಾ ಎ: 91.2 ಓವರ್​ಗಳಲ್ಲಿ 309 ಮತ್ತು ವಿಕೆಟ್​ ನಷ್ಟವಿಲ್ಲದೆ 30, ಭಾರತ ಎ: 234 (ಸುದರ್ಶನ್​ 32, ಆಯುಷ್​ ಮಹಾತ್ರೆ 65, ಪಡಿಕ್ಕಲ್​ 6, ಪಾಟಿದಾರ್​ 19, ಪಂತ್​ 17, ಬಡೋನಿ 38, ತನುಷ್​ 13, ಸುಬ್ರಯೆನ್​ 61ಕ್ಕೆ 5, ಸಿಪಮ್ಲ 35ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net