ಟಿಫನ್ ಬಾಕ್ಸ್​ನಲ್ಲೇನಿರಬಹುದು ಗೆಸ್ ಮಾಡಿ!

Pankaja Kasturi rachita ram
Published on

ಬೆಂಗಳೂರು: ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರನ್ನು 'ಕಸ್ತೂರಿ' ಬಿಡುವುದಿಲ್ಲ, ಹೊಸದೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸಿನಿಮಾದ ಹೆಸರು ಪಂಕಜ ಕಸ್ತೂರಿ ಎಂಬಿತ್ಯಾದಿ ಸುದ್ದಿ ಒಂದರ ಬೆನ್ನಿಗೊಂದರಂತೆ ಓದುಗರ ಮನ ಸೇರಿವೆ. ಈಗ ಸ್ವತಃ ಅವರೇ ಪಂಕಜ ಕಸ್ತೂರಿ ಬಗ್ಗೆ ಟ್ವೀಟ್ ಮಾಡಿದ್ದಾರೆ.

ದೀಪಾವಳಿ ಹಬ್ಬದ ಶುಭ ಸಂದರ್ಭವನ್ನು ಅವರು ಕನ್ನಡ ಸಿನಿಮಾ ಪ್ರಿಯರಿಗೆ ಶುಭಹಾರೈಸುವುದಕ್ಕೆ ಹಾಗೂ ತಮ್ಮ ಹೊಸ ಸಿನಿಮಾ ಪಂಕಜ ಕಸ್ತೂರಿಯ ಫಸ್ಟ್ ಲುಕ್ ಬಿಡುಗಡೆ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಕುತೂಹಲ ಕೆರಳಿಸುವಂತೆ, ನಿರೀಕ್ಷೆ ಹುಟ್ಟಿಸುವಂತಹ ಭರವಸೆಯ ಮಾತುಗಳನ್ನು ಸರಣಿ ಟ್ವೀಟ್ ಮೂಲಕ ಪ್ರಕಟಿಸಿ ಗಮನಸೆಳೆದಿದ್ದಾರೆ. ಮೊದಲ ಟ್ವೀಟ್​ ಜತೆಗೆ ಪಂಕಜ ಕಸ್ತೂರಿಯ ಪೋಸ್ಟರ್ ಅನ್ನು ಅಪ್ಲೋಡ್ ಮಾಡಿದ್ದಾರೆ.

ಟ್ವೀಟ್​ನಲ್ಲಿರುವುದಿಷ್ಟು - ವಿಶೇಷ ಪ್ರಕಟಣೆ. ಟೈಟಲ್ ಹೇಳಿದ್ಮೇಲೆ 1st ಲುಕ್ ಬಿಡ್ಡೆ ಇದ್ರೆ ಹೆಂಗೇ? ನಾನು "ಪಂಕಜ ಕಸ್ತೂರಿ" ಯಾಗಿ ನಿಮ್ಮ ಮುಂದೆ ಬರ್ತಿದೀನಿ, ನಿಮ್ಮ ಮನೆ ಮನಸ್ಸಿಗೆ ಬರ ಮಾಡ್ಕೊಳಿ. ದೀಪಾವಳಿಯನ್ನ ಸೆಲೆಬ್ರೇಟ್ ಮಾಡ್ಕೊಳಿ. ಎಲ್ರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಎರಡನೇ ಟ್ವೀಟ್​ನಲ್ಲಿರುವುದಿಷ್ಟು - ಆಹ್ ಆಮೇಲೆ ಟಿಫನ್ ಬಾಕ್ಸಲ್ಲಿ ಏನಿದೆ ಅಂತ ಗ್ಯೆಸ್ ಮಾಡ್ತೀರಿ. - ನಿಮ್ಮ ರಚಿತಾ ರಾಮ್.

ಶ್ರೀಭವಾನಿ ಆರ್ಟ್ಸ್ ಪ್ರಸ್ತುತ ಪಡಿಸುತ್ತಿರುವ ಸಿನಿಮಾ ಇದಾಗಿದ್ದು, ರಚಿತಾ ರಾಮ್ ಅವರು ಪಂಕಜ ಕಸ್ತೂರಿಯಾಗಿ ಕಾಣಿಸಿಕೊಂಡಿದ್ದಾರೆ. ರವೀಶ್ ಆರ್.ಸಿ. ನಿರ್ಮಾಪಕರು. ಮಯೂರ ರಾಘವೇಂದ್ರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ ಎಂಬ ಮಾಹಿತಿ ಪೋಸ್ಟರ್​ನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net