

ಮುಂಬೈ: ರಾಷ್ಟ್ರಪ್ರಶಸ್ತಿ ವಿಜೇತ, ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ತಂದೆ ವಿಧಿವಶರಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಅವರ OMG-2 ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಪಂಡಿತ್ ಬನಾರಸ್ ತಿವಾರಿ(98) ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿರುವ ಬೆಲ್ಸಂದ್ ಗ್ರಾಮದ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇತ್ತೀಚಿಗೆ OMG-2 ಚಿತ್ರದ ಪ್ರಚಾರಕಾರ್ಯದ ವೇಳೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಂಕಜ್ ತ್ರಿಪಾಠಿ ನಮ್ಮ ತಂದೆ ನನ್ನನ್ನು ವೈದ್ಯನನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದರು. ಆದರೆ, ನಾನು ನಟನಾಗಿ ಜೀವನವನ್ನು ರೂಪಿಸಿಕೊಂಡಿದ್ದೇನೆ. ಅವರು ಇದುವರೆಗೂ ನಾನು ನಟಿಸಿರುವ ಒಂದು ಸಿನಿಮಾಗಳನ್ನು ನೋಡಿಲ್ಲ ಎಂದು ಮಾತನಾಡುವ ವೇಳೆ ಹೇಳಿಕೊಂಡಿದ್ದರು.