ಸುಸೂತ್ರವಾಗಿ ನಡೆದ ದಸರಾ; ಹರಕೆ ತೀರಿಸಿದ ರೋಹಿಣಿ ಸಿಂಧೂರಿ

sindhoori
Published on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಕರೊನಾ ಹಾವಳಿ ನಡುವೆಯೂ ಸುಸೂತ್ರವಾಗಿ ನಡೆದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅದಕ್ಕಾಗಿ ಹೇಳಿಕೊಂಡಿದ್ದ ಹರಕೆ ತೀರಿಸಿದ್ದಾರೆ.

ದಸರಾ ಸಂದರ್ಭದಲ್ಲಿ ಕೆಲವು ದಿನಗಳ ಮುಂಚೆ ಮೈಸೂರಿಗೆ ವರ್ಗಾವಣೆ ಆಗಿ ಬಂದಿದ್ದ ರೋಹಿಣಿ, ದಸರಾ ಸುಸೂತ್ರವಾಗಿ ನಡೆಯುವಂತೆ ಆಶಿಸಿ ತಾಯಿ ಶ್ರೀಚಾಮುಂಡೇಶ್ವರಿಯಲ್ಲಿ ಹರಕೆ ಹೊತ್ತುಕೊಂಡಿದ್ದರು.

ಹೀಗಾಗಿ ಸೋಮವಾರ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಸಂಜೆ ಚಾಮುಂಡಿಬೆಟ್ಟಕ್ಕೆ ಕುಟುಂಬಸಮೇತರಾಗಿ ತೆರಳಿದ ರೋಹಿಣಿ ಸಿಂಧೂರಿ, ಅಲ್ಲಿ ತಂದೆ, ತಾಯಿ, ಪತಿ ಹಾಗೂ ಮಗುವಿನ ಜತೆ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net