ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಉರುಸ್‌ಗೆ ಚಾಲನೆ

ಚಿತ್ರ 31ಎಸ್ ಡಿ ಪಿ 01
Published on

ಸಿದ್ದಾಪುರ: ಸರ್ವಧರ್ಮ ಸಂಕೇತ, ಭಕ್ತರ ನಂಬಿಕೆಗೆ ಹೆಸರುವಾಸಿಯಾಗಿರುವ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಷಾ ವಲಿ ಉರುಸ್ ನೇರ್ಚೆಗೆ ಗಣ್ಯರು ಚಾಲನೆ ನೀಡಿದ್ದಾರೆ.

ಶುಕ್ರವಾರ ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಉರೂಸ್‌ನಲ್ಲಿ ಸರ್ವಧರ್ಮಿಯರು ನಂಬಿಕೆಯೊಂದಿಗೆ ಭಾಗವಹಿಸುತ್ತಿದ್ದಾರೆ. ತಮ್ಮ ಕಷ್ಟಕಾರ್ಪಣ್ಯಗಳ ಇಷ್ಟಾರ್ಥ ಹರಕೆಗಳನ್ನು ತೀರಿಸುವುದರೊಂದಿಗೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುತ್ತಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಫೆ.3ರವರೆಗೆ ಉರೂಸ್‌ನಡೆಯಲಿದ್ದು, ಕೊನೆಯ ದಿನದಂದು ಸರ್ವಧರ್ಮ ಸಮ್ಮೇಳನಕ್ಕೆ ವಿವಿಧ ಧಾರ್ಮಿಕ ಪಂಡಿತರು, ಜನಪ್ರತಿನಿಧಿಗಳು, ಸಮಾಜಸೇವಕರು, ಗಣ್ಯರು ಭಾಗವಹಿಸಲಿದ್ದಾರೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಜುಮ ಮಸೀದಿ ಖತೀಬ್ ಝುಬೈರ್ ಸಖಾಫಿ ಮೌಲೂದ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಪ್ರವಚನಕಾರರಾಗಿ ಆಗಮಿಸಿದ ಸಯ್ಯದ್ ಅಬ್ದು ರೆಹಮಾನ್, ಜುಮ ಮಸೀದಿಯ ಕಮಿಟಿ ಉಪಾಧ್ಯಕ್ಷ ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಖಜಾಂಚಿ ಟಿ.ಕೆ. ಮುಸ್ತಫ, ಜಂಟಿ ಕಾರ್ಯದರ್ಶಿಗಳಾದ ಎ.ಎಚ್.ಶಮೀರ್, ಫಜಲ್ ರೆಹಮಾನ್, ತಾರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ. ಅಲಿ ಹಾಜಿ, ಮುಹಿಮ್ಮಾತುದ್ದೀನ್ ಮದ್ರಸದ ಸದರ್ ಮುಅಲ್ಲಿಂ, ಸಬಾಪ್ ಸಖಾಫಿ ಅಲ್ ಹಿಮಮಿ, ಪ್ರಮುಖರಾದ ಬಶೀರ್, ಫೈಜಲ್, ಮುನೀರ್, ಪಾಲಿಬೆಟ್ಟ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಸಿ.ಕೆ. ಮೊಯ್ದು ಹಾಜಿ, ಸಿ.ಎಂ.ಅಬ್ದುಲ್ ಜಬ್ಬಾರ್ ಹಾಜಿ, ಕೆ.ಎಚ್.ಅಬೂಬಕ್ಕರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net