More

    ಕಾಶ್ಮೀರ ಭಾರತದ್ದು- ನಿಖರ ಭೂಪಟವನ್ನೇ ಪ್ರಸಾರ ಮಾಡಿತು ಪಾಕಿಸ್ತಾನದ ಪಿಟಿವಿ ನ್ಯೂಸ್!

    ಇಸ್ಲಾಮಾಬಾದ್​: ಜಮ್ಮು-ಕಾಶ್ಮೀರವನ್ನು ಸ್ವಾಧೀನ ಪಡಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನದ ಪಿಟಿವಿ ನ್ಯೂಸ್​ ಚಾನೆಲ್​ ಜೂನ್ 6ರಂದು ಕಾಶ್ಮೀರ ಭಾರತದ ಭೂಭಾಗ ಎಂಬುದನ್ನು ಸಾರುವ ನಿಖರ ಭೂಪಟವನ್ನು ಪ್ರಸಾರ ಮಾಡಿತ್ತು. ಪಿಟಿವಿ ನ್ಯೂಸ್ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಎಂಬ ಕಾರಣಕ್ಕೆ ಈ ವಿಚಾರ ಹೆಚ್ಚು ಮಹತ್ವ ಪಡೆದುಕೊಂಡಿದೆ.

    ಜೂನ್ 6ರಂದು ಕಾಶ್ಮೀರ ಸಂಬಂಧಿತ ಸುದ್ದಿ ಪ್ರಸಾರವಾಗಿದ್ದು, ಅದರಲ್ಲಿ ತೋರಿಸಿದ್ದ ಭೂಪಟದಲ್ಲಿ ಭಾರತ ಭೂಭಾಗವಾಗಿಯೇ ಕಾಶ್ಮೀರ ಕಾಣಿಸಿತ್ತು. ಪತ್ರಕರ್ತರು ಮಾಡಿದ ಯಡವಟ್ಟು ಅದು ಎಂಬುದು ಸುದ್ದಿ ಪ್ರಸಾರವಾದ ನಂತರದಲ್ಲಿ ಎಲ್ಲರಿಗೂ ಮನದಟ್ಟಾಗಿದೆ. ಈ ವಿಷಯ ಜೂನ್ 8ರಂದು ಸಂಸತ್ತಿನಲ್ಲಿ ಪ್ರಸ್ತಾಪವಾಗಿತ್ತು. ಸೆನೆಟ್ ಚೇರ್ಮನ್​ ಸಾಜಿದ್​ ಸಂಜ್ರಾನಿ ಅವರು ಈ ವಿಷಯವನ್ನು ಮಾಹಿತಿ ಮತ್ತು ಪ್ರಸಾರ ಖಾತೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಗೆ ರವಾನಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

    ಇದನ್ನೂ ಓದಿ: ಕೆಂಪೇಗೌಡ ಲೇಔಟ್​ ಸೈಟ್​ ತಗೊಂಡಿದ್ದೀರಾ? ಹಾಗಾದ್ರೆ ನಿಮ್ ಕೈಲಿರೋ ಹಕ್ಕುಪತ್ರ ಚೆಕ್​ ಮಾಡ್ಕೊಳ್ಳಿ..

    ಇದರಂತೆ, ಪಾಕಿಸ್ತಾನ್ ಟೆಲಿವಿಷನ್​ (ಪಿಟಿವಿ)ನ ಆಡಳಿತ ಮಂಡಳಿ ಜೂನ್​ 7 ರಂದು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ ತನಿಖೆ ನಂತರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿತ್ತು. ಜೂನ್ 10ರಂದು ಆಡಳಿತ ಮಂಡಳಿ ಇದಕ್ಕೆ ಸಂಬಂಧಿಸಿ ಇಬ್ಬರು ಪತ್ರಕರ್ತರನ್ನು ಕೆಲಸದಿಂದ ವಜಾಗೊಳಿಸಿದೆ.
    ವೃತ್ತಿಯಲ್ಲಿ ಆಗಿರುವ ಕಣ್ತಪ್ಪಿನ ದೋಷದಿಂದಾಗಿ ತಪ್ಪು ಮಾಹಿತಿ ಪ್ರಸಾರವಾಗಿದೆ. ಇದಕ್ಕೆ ಇಬ್ಬರು ಉದ್ಯೋಗಿಗಳು ಹೊಣೆಗಾರರಾಗಿದ್ದು, ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಪಿಟಿವಿ ಆಡಳಿತ ಮಂಡಳಿ ಟ್ವೀಟ್ ಮಾಡಿತ್ತು. ಪಾಕಿಸ್ತಾನ ತನ್ನ ಅಧಿಕೃತ ಮ್ಯಾಪ್​ನಲ್ಲಿ ಕಾಶ್ಮೀರದ ಭಾಗವನ್ನು ತನ್ನದೆಂದು ಬಿಂಬಿಸಿದೆ. ಇದೇ ವೇಳೆ ಭಾರತದ ಭೂಪಟಗಳಲ್ಲಿ ಕಾಶ್ಮೀರದ ಈ ಭಾಗ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ (ಪಿಒಕೆ) ಯಾಗಿ ಕಾಣುತ್ತದೆ. (ಏಜೆನ್ಸೀಸ್)

    ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts