More

    ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಶಾಲಾ ಮಕ್ಕಳಲ್ಲಿ ವರ್ಣ ತಾರತಮ್ಯ ಉಂಟುಮಾಡುವ ರೀತಿಯ ಪಠ್ಯ ಈಗ ವಿವಾದಕ್ಕೀಡಾಗಿದೆ. ಆಂಗ್ಲ ವರ್ಣಮಾಲೆಯಲ್ಲಿ ಯು ಎಂಬ ಅಕ್ಷರಕ್ಕೆ ಅಗ್ಲಿ ಎಂಬ ಪದವನ್ನು ಮಕ್ಕಳಿಗೆ ಪರಿಚಯಿಸಿದ್ದು, ಚಿತ್ರ ರೂಪದಲ್ಲಿ ಅರ್ಥ ಮಾಡಿಸುವುದಕ್ಕೆ ಕಪ್ಪು ವರ್ಣದ ಮನುಷ್ಯನ ಚಿತ್ರವನ್ನೂ ನೀಡಲಾಗಿದೆ. ಈ ವಿಚಾರವೀಗ ಅಲ್ಲಿ ವಿವಾದದ ಕೇಂದ್ರಬಿಂದು.

    ಬೆಳಕಿಗೆ ಬಂದದ್ದು ಹೇಗೆ?

    ಸದ್ಯ ಕರೊನಾ ಲಾಕ್​ಡೌನ್ ಚಾಲ್ತಿಯಲ್ಲಿದೆ. ಶಾಲೆಗಳೂ ತೆರೆದಿಲ್ಲ. ಆದಾಗ್ಯೂ ಒಬ್ಬ ವಿದ್ಯಾರ್ಥಿಯ ತಂದೆ ಶಾಲೆಯಿಂದ ಕೊಟ್ಟ ಆ ಪುಸ್ತಕ ಹಿಡಿದು ಮಗುವಿಗೆ ಪಾಠ ಹೇಳುವಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಅವರು ಇತರೆ ಪಾಲಕರಿಗೆ ತಿಳಿಸಿದ್ದಲ್ಲದೆ, ಶಿಕ್ಷಣ ಇಲಾಖೆಯ ಗಮನಕ್ಕೂ ತಂದ ಕಾರಣ ಇದು ಎಲ್ಲರ ಗಮನಸೆಳೆಯಿತು ಎಂದು ಮೂಲಗಳು ತಿಳಿಸಿವೆ.

    ಈಸ್ಟ್​ ಬರ್ದ್ವಾನ್ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ಈ ವಿವಾದಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಪ್ರೀ-ಪ್ರೈಮರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಇವರು. ಮಕ್ಕಳಿಗೆ ಪೂರೈಸಲಾದ ಪಠ್ಯ ಪುಸ್ತಕದಲ್ಲಿ ಯು ಎಂಬ ಅಕ್ಷರವನ್ನು ಪರಿಚಯಿಸುವ ಸಂದರ್ಭದಲ್ಲಿ ಆ ಅಕ್ಷರದ ಕೆಳಗೆ ಕಪ್ಪು ವರ್ಣದ ಬಾಲಕನ ಚಿತ್ರವನ್ನು ಮುದ್ರಿಸಲಾಗಿದೆ.

    ಇದನ್ನೂ ಓದಿ: ಉದ್ವೇಗ ನಿಯಂತ್ರಿಸುವ ಯೋಗಾಭ್ಯಾಸ

    ಶಿಕ್ಷಣ ಇಲಾಖೆ ಶಿಫಾರಸು ಮಾಡಿರುವ ಪಠ್ಯ ಪುಸ್ತಕಗಳ ಪಟ್ಟಿಯಲ್ಲಿ ಈ ಪುಸ್ತಕ ಇಲ್ಲ. ಆ ಶಾಲೆಯಲ್ಲಿ ಮಾತ್ರವೇ ಅದನ್ನು ಬಳಸಲಾಗಿದೆ. ಅದು ಶಾಲೆಯ ನಿರ್ಧಾರ. ಇಂತಹ ವಿಷಯಗಳನ್ನೆಲ್ಲ ನಾವು ಸಹಿಸುವುದು ಸಾಧ್ಯವೇ ಇಲ್ಲ. ಇದು ಮಕ್ಕಳ ಮನಸ್ಸಿನಲ್ಲಿ ಪೂರ್ವಗ್ರಹಗಳು ನೆಲೆ ನಿಲ್ಲುವಂತೆ ಮಾಡುತ್ತದೆ. ಇಂತಹ ಕ್ರಮಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಮುನಿಸಿಪಾಲಿಟಿ ಶಾಲೆಯ ಇಬ್ಬರು ಶಿಕ್ಷಕರನ್ನು ತತ್​ಕ್ಷಣದಿಂದಲೇ ಜಾರಿಗೆ ಬರುವಂತೆ ಘಟನೆ ಬೆಳಕಿಗೆ ಬಂದ ಕೂಡಲೆ ಪ್ರಾಥಮಿಕ ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ. ತನಿಖೆಯ ಎಲ್ಲ ಕ್ರಮಗಳು ಪೂರ್ಣಗೊಂಡ ನಂತರದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚಟರ್ಜಿ ಹೇಳಿದ್ಧಾರೆ.

    ಇಂದು ನಟಿ ಮಯೂರಿ ಮದುವೆ: ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿಯಲು ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts