More

    ಮುಸ್ಲಿಮರು ಭಾರತ ತಂಡದ ಸೋಲು ನಿರೀಕ್ಷಿಸ್ತಾರೆ: ವಿಷ ಕಾರುತ್ತಿರುವ ಪಾಕ್​ ನಟಿ ಸಹರ್ ಶಿನ್ವಾರಿ…

    ಇಸ್ಲಾಮಾಬಾದ್​: ‘ಭಾರತದಲ್ಲಿನ ಪ್ರತಿಯೊಬ್ಬ ನಿಜವಾದ ಮುಸಲ್ಮಾನ ಸಹ ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು ಸೋಲುವುದನ್ನು ನೋಡಲು ಬಯಸುತ್ತಾರೆ…’ ಎಂದು ಪಾಕಿಸ್ತಾನಿ ನಟಿ ಸಹರ್ ಶಿನ್ವಾರಿ ವಿಷ ಕಾರಿದ್ದಾಳೆ.

    ಇದನ್ನೂ ಓದಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು 2 ದಿನದಲ್ಲಿ ತಲುಪಬಹುದು: ಗಡ್ಕರಿ ಭರವಸೆ 
    ಐಸಿಸಿ ಕ್ರಿಕೆಟ್ ವಿಶ್ವಕಪ್-2023 ರಲ್ಲಿ ಭಾರತದ ಸೋಲಿಗಾಗಿ ಈ ನಟಿ ಅಲ್ಲಾಹುನಲ್ಲಿ ಪ್ರಾರ್ಥಿಸುತ್ತಿದ್ದಾಳೆ. ಟೀಂ ಇಂಡಿಯಾ ತಂಡ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದಾಗಿನಿಂದ ಈಕೆ ಟ್ವಿಟರ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಷ ಉಗುಳುತ್ತಿದ್ದಾಳೆ. ಫೈನಲ್ ಪಂದ್ಯದ ಮೊದಲು ಎಲ್ಲಾ ರೀತಿಯಲ್ಲಿ ಭಾರತದ ತಂಡದ ಸೋಲಿನ ಬಗ್ಗೆ ಬರೆದುಕೊಂಡ ಈ ನಟಿ ಕಡೆಗೆ ಭಾರತೀಯ ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾಳೆ.

    ‘ಭಾರತದಲ್ಲಿನ ಪ್ರತಿಯೊಬ್ಬ ನೈಜ ಮುಸ್ಲಿಮನು ಭಾರತದ ಸೋಲು ನೋಡಲು ಬಯಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ.’ ಎಂದು ಬರೆದುಕೊಂಡಿದ್ದಾಳೆ. ಈ ಟ್ವೀಟ್ ವೈರಲ್ ಆಗಿದ್ದು, ಟ್ವೀಟ್‌ಗಾಗಿ ಸಹರ್ ಶಿನ್ವಾರಿ ಕೂಡ ಟ್ರೋಲ್ ಆಗಿದ್ದಾಳೆ. ಆದರೆ ಇದರ ಹೊರತಾಗಿಯೂ ಆಕೆ ಭಾರತ ತಂಡದ ಬಗ್ಗೆ ನಕಾರಾತ್ಮಕ ಟ್ವೀಟ್‌ಗಳನ್ನು ಮಾಡಿದ್ದಾಳೆ.

    ಇದಲ್ಲದೆ, ಮತ್ತೊಂದು ಟ್ವೀಟ್‌ನಲ್ಲಿ, ಸಹರ್ ಶಿನ್ವಾರಿ, ‘ನನ್ನ ಕೊನೆಯ ಭರವಸೆ ಆಸ್ಟ್ರೇಲಿಯಾ. ಅವರು ಪಾಕಿಸ್ತಾನದ 2.3 ಕೋಟಿ ಜನರನ್ನು, ಭಾರತದ 16 ಕೋಟಿ ಮುಸ್ಲಿಮರನ್ನು ಮತ್ತು ಬಾಂಗ್ಲಾದೇಶದ 1.6 ಕೋಟಿ ಜನರನ್ನು ನಿರಾಶೆಗೊಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

    ಮತ್ತೊಂದು ಟ್ವೀಟ್‌ನಲ್ಲಿ, ಸಹರ್ ಶಿನ್ವಾರಿ, “ಇಂದಿನ ಪಂದ್ಯವನ್ನು ಯಾರು ಗೆಲ್ಲುತ್ತಾರೆ? 1. ಆಸ್ಟ್ರೇಲಿಯಾ ಮತ್ತು 2. ಆಸ್ಟ್ರೇಲಿಯಾ, 1 ಮತ್ತು 2 ರ ನಡುವೆ ಮಾತ್ರ ಆಯ್ಕೆ ಮಾಡಬಹುದು.

    ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಭಾರತ ಗೆದ್ದ ನಂತರ, ಈಕೆ ತನ್ನ ಕೋಪವನ್ನು ಹೊರಹಾಕಿದ್ದಳು. “ಭಾರತ ತಂಡವು ಮತ್ತೊಮ್ಮೆ ವಿಶ್ವಕಪ್ ಫೈನಲ್ ತಲುಪಿರುವುದನ್ನು ನಾನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಳು.

    ಮತ್ತೊಂದು ಪೋಸ್ಟ್‌ನಲ್ಲಿ, “ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಉತ್ತಮ ನಟರು, ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆಲುವಿಗೆ ನಿಗದಿಪಡಿಸಲಾಗಿದೆ ಎಂದು ಅವರಿಗೆ ತಿಳಿದಿದೆ. ಆದರೆ ಅವರು ನಿಜವಾಗಿಯೂ ಈ ಪಂದ್ಯವನ್ನು ಆಡುವ ರೀತಿ ನಟಿಸುತ್ತಿದ್ದಾರೆ” ಎಂದು ಸಹರ್ ಬರೆದದುಕೊಂಡಿದ್ದಾಳೆ.

    ‘ಸೌಂಡ್ ಪಾರ್ಟಿ’ಯಲ್ಲಿ ನನ್ನ ಪಾತ್ರ ಧೋನಿಯಂತೆ ಇರಲಿದೆ: ನಾಯಕಿ ಹೃತಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts