

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ನಿರ್ಧಾರ ಇಡೀ ವಿಶ್ವ ಕ್ರಿಕೆಟ್ಗೆ ದಿಢೀರ್ ಶಾಕ್ ನೀಡಿದೆ. ಟಿ20 ವಿಶ್ವಕಪ್ ಟೂನಿರ್ಯಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾವಿಸಿದ್ದರೂ, ಕರೊನಾ ವೈರಸ್ ಭೀತಿಯಿಂದ ಟೂನಿರ್ಯೇ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಹಾಲಿ-ಮಾಜಿ ಆಟಗಾರರಿಂದ ಧೋನಿ ನಿವೃತ್ತಿ ಜೀವನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಧೋನಿ ಅಭಿಮಾನಿ ಪಾಕಿಸ್ತಾನ ಮಹಿಳಾ ತಂಡ ಸದಸ್ಯೆ ಕೈನತ್ ಇಮ್ತಿಯಾಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನೀವೊಬ್ಬ ದಿಗ್ಗಜ ಕ್ರಿಕೆಟಿಗ, ಯಶಸ್ಸಿನ ನಾಯಕ ಹಾಗೂ ಅತ್ಯುತ್ತಮ ಫಿನಿಷರ್ ನೀವು. ನಿಮಗೆ ನೀವೇ ಸಾಟಿ. ಸರ್, ನಿಮ್ಮ ವೃತ್ತಿ ಜೀವನವೇ ನಮಗೆ ಮಾದರಿ. ವಿಶ್ವ ಕ್ರಿಕೆಟ್ ನಿಮ್ಮ ಕೊಡುಗೆಯನ್ನು ಕೇವಲ ಪದಗಳಿಂದ ವಣಿರ್ಸಲಾಗುವುದಿಲ್ಲ ಎಂದು ಧೋನಿ ಅವರ ದೊಡ್ಡ ಅಭಿಮಾನಿ ಪಾಕಿಸ್ತಾನದ ಆಟಗಾತಿರ್ ಕೈನತ್ ಇಮ್ತಿಯಾಜ್ ಬರೆದುಕೊಂಡಿದ್ದಾರೆ. ಜತೆಗೆ 2011ರ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಧೋನಿ ಸಿಡಿಸಿದ ವಿನ್ನಿಂಗ್ ಸಿಕ್ಸರ್ ವಿಡಿಯೋವನ್ನು ಪ್ರಕಟಿಸಿದ್ದಾರೆ. ಧೋನಿ ವಿದಾಯದ ಬೆನ್ನಲ್ಲೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಕೈನತ್ ಇಮ್ತಿಯಾಜ್ ಜತೆಗೆ, ಮಾಜಿ ವೇಗಿ ಶೋಯಿಬ್ ಅಖ್ತರ್ ಸೇರಿದಂತೆ ಪಾಕಿಸ್ತಾನದ ಹಲವು ಆಟಗಾರರು ಧೋನಿಗೆ ಶುಭಾಶಯ ಹೇಳಿದ್ದಾರೆ. ಪಾಕಿಸ್ತಾನ ತಂಡದ ಪ್ರಮುಖ ವೇಗಿಯಾಗಿರುವ ಕೈನತ್ ಇಮ್ತಿಯಾಜ್, ಇದುವರೆಗೂ 11 ಏಕದಿನ 12 ಟಿ20 ಪಂದ್ಯಗಳನ್ನಡಿದ್ದಾರೆ. 2019ರ ಅಕ್ಟೋಬರ್ನಿಂದ ರಾಷ್ಟ್ರೀಯ ತಂಡದ ಪರ ಕಡೇ ಬಾರಿಗೆ ಆಡಿದ್ದರು.