ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!

pak web
Published on

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 10 ವರ್ಷಗಳ ಕಾಲ ಲೈಂಗಿಕವಾಗಿ ತಮ್ಮನ್ನು ಬಳಸಿಕೊಂಡಿರುವ ಬಾಬರ್, ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಬಾಬರ್ ಅಜಮ್‌ಗೆ ಕ್ಲಾಸ್‌ಮೇಟ್ ಆಗಿದ್ದೆ ಎಂದು ಹೇಳಿಕೊಂಡಿರುವ ಮಹಿಳೆ, 2010ರಲ್ಲಿ ಬಾಬರ್ ಪ್ರೇಮ ನಿವೇದನೆ ಮಾಡಿದಾಗ ಒಪ್ಪಿಕೊಂಡಿದ್ದೆ. ಬಳಿಕ 2011ರಲ್ಲಿ ಮದುವೆಯಾಗುವ ಭರವಸೆ ನೀಡಿ, ಬಾಡಿಗೆ ಮನೆಯೊಂದರಲ್ಲಿ ನನ್ನನ್ನು ಇರಿಸಿದ್ದರು. ಕ್ರಿಕೆಟ್ ಆಟದ ಸಹಿತ ಅವರ ಖರ್ಚು ವೆಚ್ಚಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಮದುವೆಯಾಗುವ ಸಮಯ ಇನ್ನೂ ಬಂದಿಲ್ಲ ಎನ್ನುತ್ತಿದ್ದರು. 2016ರಲ್ಲಿ ನಾನು ಗರ್ಭಿಣಿಯಾದಾಗ ಅವರ ವರ್ತನೆ ಬದಲಾಯಿತು. ಮದುವೆಯಾಗಲು ನಿರಾಕರಿಸಿದರು ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಅಥವಾ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಬರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಆ ಮಹಿಳೆ ಹಿಂದೆಯೂ ಬಾಬರ್ ವಿರುದ್ಧ ಇಂಥದ್ದೇ ಆರೋಪ ಹೊರಿಸಿ, ಅದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದಾಗ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net