ಲಾಹೋರ್​​ನ ಅನಾರ್ಕಲಿ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್​​ ಸ್ಫೋಟ; ಮೂವರು ಸಾವು!

Blast
Published on

ಲಾಹೋರ್​: ಪಾಕಿಸ್ತಾನದ ಪ್ರಮುಖ ನಗರ ಲಾಹೋರ್​​ನಲ್ಲಿರುವ ಅನಾರ್ಕಲಿ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್​​ ಸ್ಫೋಟಗೊಂಡಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 23 ಮಂದಿಗೂ ಹೆಚ್ಚು ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡಿರುವ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಲಾಹೋರ್​​ನ ಪ್ರಸಿದ್ಧ ಅನಾರ್ಕಲಿ ಮಾರ್ಕೆಟ್​ನ ಪಾನ್ ಮಂಡಿಯಲ್ಲಿ ಈ ಬಾಂಬ್​​ ಸ್ಫೋಟಗೊಂಡಿದ್ದು, ಪ್ರತಿದಿನ ಜನ ಜಂಗುಳಿಯಿಂದ ಕೂಡಿರುತ್ತಿತ್ತು.

ಲಭ್ಯವಾಗಿರುವ ಮಾಹಿತಿ ಪ್ರಕಾರ ಬೈಕ್​ನಲ್ಲಿಟ್ಟಿದ್ದ ಬಾಂಬ್​ ಸ್ಫೋಟಗೊಂಡಿದ್ದು, ಈ ವೇಳೆ ಸ್ಥಳದಲ್ಲಿ ನಿಲ್ಲಿಸಿದ್ದ ಅನೇಕ ವಾಹನಗಳು ಜಖಂಗೊಂಡಿವೆ. ಬಾಂಬ್​ ಸ್ಫೋಟದ ಹೊಣೆಯನ್ನ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಇನ್ಸ್​​ಪೆಕ್ಟರ್​​ ಜನರಲ್​​ ಡಾ. ಮೊಹಮ್ಮದ್​​ ಅಬಿದ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net