ಪಾಕಿಸ್ತಾನ ವಿರುದ್ಧ ಟಿ20 ಸರಣಿ ಸೋತ ದಕ್ಷಿಣ ಆಫ್ರಿಕಾ

sa pak web
Published on

ಲಾಹೋರ್: ಡೇವಿಡ್ ಮಿಲ್ಲರ್ (85 *ರನ್, 45 ಎಸೆತ, 5 ಬೌಂಡರಿ, 7 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ದಕ್ಷಿಣ ಆಫ್ರಿಕಾ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳಿಂದ ಸೋಲು ಎದುರಿಸಿದೆ. ಇದರಿಂದ ಹೆನ್ರಿಕ್ ಕ್ಲಾಸೆನ್ ಬಳಗ 2-1ರಿಂದ ಸರಣಿ ಸೋಲು ಕಂಡಿತು.

ಗದ್ದಾಫಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ ಒಂದು ಹಂತದಲ್ಲಿ 65 ರನ್‌ಗೆ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಆಗ ಡೇವಿಡ್ ಮಿಲ್ಲರ್ ಸ್ಫೋಟಕ ಆಟವಾಡಿ ತಂಡವನ್ನು 8 ವಿಕೆಟ್‌ಗೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಆದರೆ ಮೊಹಮದ್ ರಿಜ್ವಾನ್ (42), ನಾಯಕ ಬಾಬರ್ ಅಜಮ್ (44) ಉಪಯುಕ್ತ ಆಟದಿಂದ ಪಾಕಿಸ್ತಾನ ತಂಡ 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿ ಗೆಲುವು ಒಲಿಸಿಕೊಂಡಿತು.

ದಕ್ಷಿಣ ಆಫ್ರಿಕಾ: 8 ವಿಕೆಟ್‌ಗೆ 164 (ಮಲಾನ್ 27, ಕ್ಲಾಸೆನ್ 0, ಡೇವಿಡ್ ಮಿಲ್ಲರ್ 85*, ನವಾಜ್ 13ಕ್ಕೆ 2, ಜಹಿದ್ 40ಕ್ಕೆ 3, ಹಸನ್ ಅಲಿ 29ಕ್ಕೆ 2), ಪಾಕಿಸ್ತಾನ: 18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 169 (ರಿಜ್ವಾನ್ 42, ಬಾಬರ್ ಅಜಮ್ 44, ನವಾಜ್ 18*, ಹಸನ್ ಅಲಿ 20*, ಶಮ್ಸಿ 25ಕ್ಕೆ 4).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net