

National Security Advisor| ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ದಾಳಿಯ ನಂತರ ಭಾರತದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಪಾಕಿಸ್ತಾನ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಅಸಿಮ್ ಮಲಿಕ್ ಅವರನ್ನು ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಆಗಿ ನೇಮಿಸಿದೆ. ಪ್ರಸ್ತುತ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ನ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಲಿಕ್, ಇನ್ಮುಂದೆ ಎನ್‌ಎಸ್‌ಎಯ ಹೆಚ್ಚುವರಿ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಐಎಸ್‌ಐ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಮಲಿಕ್ ಸೇನೆಯ ಜನರಲ್ ಪ್ರಧಾನ ಕಚೇರಿಯಲ್ಲಿ ಎಜಿ ಆಗಿ ಸೇವೆ ಸಲ್ಲಿಸಿದ್ದರು. ಅಸಿಮ್ ಮಲಿಕ್ ಪಾಕಿಸ್ತಾನದ ಹತ್ತನೇ ಎನ್‌ಎಸ್‌ಎ ಆಗಿದ್ದು, ಸೇವೆಯಲ್ಲಿರುವ ಐಎಸ್‌ಐ ಮುಖ್ಯಸ್ಥರಿಗೆ ಎರಡು ಪ್ರಮುಖ ಹುದ್ದೆಗಳಲ್ಲಿ ಏಕಕಾಲದಲ್ಲಿ ಸೇವೆ ಸಲ್ಲಿಸುವ ಕಾರ್ಯವನ್ನು ನೀಡಲಾಗುತ್ತಿರುವುದು ಇದೇ ಮೊದಲು.
ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಅಸಿಮ್ ಮಲಿಕ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಹೆಚ್ಚುವರಿ ಹೊಣೆಯನ್ನು ವಹಿಸಿಕೊಳ್ಳುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
(ಏಜೆನ್ಸೀಸ್)
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಈ ಹತ್ಯಾಕಾಂಡದ ನಂತರ ಪಾಕಿಸ್ತಾನವು ಭಾರತದ ಪ್ರತೀಕಾರದ ಭಯದಲ್ಲಿದೆ, ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು “ವಿಶ್ವಾಸಾರ್ಹ ಗುಪ್ತಚರ” ವನ್ನು ಉಲ್ಲೇಖಿಸಿ ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ದೇಶದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತ ಯುದ್ಧವನ್ನು ಪ್ರಾರಂಭ ಮಾಡುತ್ತದೆ ಎಂದು ಹೇಳಿದ್ದರು.