ಪಾಕ್-ಅಫ್ಘಾನ್ ಸಂಘರ್ಷ: ಭಾರತವನ್ನು ದೂಷಿಸುವ ಪಾಕಿಸ್ತಾನದ ಹೇಳಿಕೆ ಆಧಾರರಹಿತ ಎಂದ ಅಫ್ಘಾನ್ ರಕ್ಷಣಾ ಸಚಿವ Maulvi Mohammad Yaqub

Maulvi Mohammad Yaqub
Published on

ಕಾಬೂಲ್​​: ಪಾಕ್-ಅಫ್ಘಾನ್ ಸಂಘರ್ಷಕ್ಕೆ ಭಾರತವನ್ನು ದೂಷಿಸುವ ಪಾಕಿಸ್ತಾನದ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಅಫ್ಘಾನ್ ರಕ್ಷಣಾ ಸಚಿವ ಮೌಲ್ವಿ ಮೊಹಮ್ಮದ್ ಯಾಕೂಬ್ ಮುಜಾಹಿದ್(Maulvi Mohammad Yaqub) ಮಂಗಳವಾರ (ಅಕ್ಟೋಬರ್​,21) ಕಿಡಿಕಾರಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುಜಾಹಿದ್, ಅಫ್ಘಾನಿಸ್ತಾನ ಸ್ವತಂತ್ರ ರಾಷ್ಟ್ರವಾಗಿ ಭಾರತದೊಂದಿಗೆ ಸಂಬಂಧವನ್ನು ಉಳಿಸಿಕೊಂಡರೂ, ಪಾಕಿಸ್ತಾನದೊಂದಿಗೆ ಉತ್ತಮ ನೆರೆಹೊರೆ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.

ಅಫ್ಘಾನ್​ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಗಳು ಯಾರಿಗೂ ಪ್ರಯೋಜನವಾಗುವುದಿಲ್ಲ. ಅಫ್ಘಾನ್ ಪ್ರದೇಶವನ್ನು ಇತರ ದೇಶಗಳ ವಿರುದ್ಧ ಬಳಸುವುದು ನಮ್ಮ ನೀತಿಯ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಬೂಲ್-ಇಸ್ಲಾಮಾಬಾದ್ ಸಂಬಂಧಗಳ ಆಧಾರವಾಗಿ ಸಂವಾದ ಮತ್ತು ಪರಸ್ಪರ ಗೌರವವನ್ನು ಒತ್ತಿ ಹೇಳಿದ್ದಾರೆ. ದೋಹಾ ಒಪ್ಪಂದವನ್ನು ಜಾರಿಗೆ ತರಲು ಸಹಾಯ ಮಾಡಲು ಟರ್ಕಿ ಮತ್ತು ಕತಾರ್‌ನಂತಹ ದೇಶಗಳನ್ನು ಮೊಹಮ್ಮದ್ ಯಾಕೂಬ್ ಆಹ್ವಾನಿಸಿದ್ದಾರೆ.

ಕದನ ವಿರಾಮ ಒಪ್ಪಂದವನ್ನು ಪಾಲಿಸಲು ಪಾಕ್​ ವಿಫಲವಾದರೆ ಸಮಸ್ಯೆಗಳು ಉಂಟಾಗಬಹುದು ಎಂದು ಮುಜಾಹಿದ್ ಎಚ್ಚರಿಸಿದ್ದಾರೆ. ಪಾಕ್​ ದಾಳಿಯ ಸಂದರ್ಭದಲ್ಲಿ ಅಫ್ಘಾನಿಸ್ತಾನ ತನ್ನ ಪ್ರದೇಶವನ್ನು ಧೈರ್ಯದಿಂದ ರಕ್ಷಿಸುತ್ತದೆ ಎಂದು ಪುನರುಚ್ಚರಿಸಿದರು. ಅಲ್ಲದೆ, ರಾಜಕೀಯ ವಿರೋಧಿಗಳನ್ನು ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುವ ಪಾಕ್ ಅಭ್ಯಾಸವನ್ನು ಮುಜಾಹಿದ್ ಟೀಕಿಸಿದರು.

ಅದರೆ, ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಕಾರ್ಯಾಚರಣೆಯನ್ನು ಪೂರ್ಣ ಪ್ರಮಾಣದ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net