

ವಿಜಯವಾಣಿ ಸುದಿಜಾಲ ಕಿನ್ನಿಗೋಳಿ
ಪದ್ಮಶಾಲಿ ಸಮಾಜದವರು ಶ್ರಮಜೀವಿಗಳು, ಹಿಂದಿನ ದಿನಗಳಲ್ಲಿಯೂ ಸರ್ಕಾರದ ಅನುದಾನಗಳಿಗೆ ಕಾಯದೆ ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ. ಮೂಲ್ಕಿ ಅರಮನೆಗೂ ಪದ್ಮಶಾಲಿ ಸಮಾಜಕ್ಕೂ ನಿರಂತರ ಅವಿನಾಭಾವ ಸಂಬಂಧ ಇತ್ತು. ಇದೀಗ ಬದುಕಿಗೆ ಪರ್ಯಾಯ ಮಾರ್ಗವಾಗಿ ಈ ಸೊಸೈಟಿಯನ್ನು ಸಮಾಜಕ್ಕೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಕಿನ್ನಿಗೋಳಿಯ ಬತ್ತಕೋಡಿ ಮುರತ್ತಮೇಲ್ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಪದ್ಮಶಾಲಿ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣರು ಆಶೀರ್ವಚನ ನೀಡಿದರು. ಶಿಬರೂರು ವೇದವ್ಯಾಸ ತಂತ್ರಿಗಳು ಶುಭಾಶಂಸನೆಗೈದರು. ಭದ್ರತಾ ಕೊಠಡಿ ಅತ್ತೂರುಬೈಲು ವೆಂಕಟರಾಜ ಉಡುಪ, ದುರ್ಗಾದಯಾ ಸೀತಾರಾಮ ಶೆಟ್ಟಿ ಆಡಳಿತ ಕಚೇರಿ ಉದ್ಘಾಟಿಸಿದರು. ದ.ಕ.ಪದ್ಮಶಾಲಿ ಮಹಾಸಭಾ ಮಂಗಳೂರು ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ ಸಮಾರಂಭ ಉದ್ಘಾಟಿಸಿದರು. ಠೇವಣಿ ಪತ್ರ ಬಿಡುಗಡೆಯನ್ನು ಪಟೇಲ್ ವಾಸುದೇವ ರಾವ್, ಕೆ.ಲವ ಶೆಟ್ಟಿ ಮತ್ತು ಪ್ರಥ್ವೀರಾಜ್ ಆಚಾರ್ಯ ನೆರವೇರಿಸಿದರು. ಪಾಲು ಬಂಡವಾಳ ಪತ್ರವನ್ನು ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಿದರು. ರಾಮ ಮಂದಿರ ಕಿನ್ನಿಗೋಳಿ ಅಧ್ಯಕ್ಷ ರಾಜೇಶ್ ನಾಯಕ್ ಉಳಿತಾಯ ಖಾತೆ ಪಾಸ್ ಪುಸ್ತಕ ವಿತರಣೆ ಮಾಡಿದರು.
ಹಳೆಯಂಗಡಿ ವೀರಭದ್ರ ಮಹಾಮ್ಮಾಯೀ ದೇವಳದ ಗುರಿಕಾರ ರತ್ನಾಕರ ಯಾನೆ ಕಾಂತಣ್ಣ ಗುರಿಕಾರ್, ಗುತ್ತಕಾಡು ಬಿಲ್ಲವ ಸಂಘದ ಅಧ್ಯಕ್ಷ ಕುಶಲ ಪೂಜಾರಿ, ಬೋಳೂರು ಶ್ರೀ ವೀರಭದ್ರ ಮಹಾಮ್ಮಾಯೀ ದೇವಳದ ಬಾಲಕೃಷ್ಣ ಕಲ್ಬಾವಿ, ಮೂಲ್ಕಿ ಮಾನಂಪಾಡಿ ದೇವಳದ ಮೊಕ್ತೇಸರ ಭಾಸ್ಕರ ಆರ್.ಶೆಟ್ಟಿಗಾರ್, ಸುರತ್ಕಲ್ ದೇವಳದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿಗಾರ್, ಸೊಸೈಟಿ ಉಪಾಧ್ಯಕ್ಷೆ ಚಂದ್ರಕಲಾ ಕೆ.ಶೆಟ್ಟಿಗಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಅಶೋಕ್, ನಿರ್ದೇಶಕರಾದ ಧನಂಜಯ ಪಿ.ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಲಕ್ಷ್ಮಣ್ ಕೆ., ಗೋಪಾಲ ಎಂ.ಶೆಟ್ಟಿಗಾರ್, ಎಲ್.ರಮೇಶ್ ಶೆಟ್ಟಿಗಾರ್, ಸೀತಾರಾಮ ಶೆಟ್ಟಿಗಾರ್, ಸುಂದರ ಶೆಟ್ಟಿಗಾರ್, ಪುಂಡಲೀಕ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ಧನರಾಜ್ ಸಿ.ಶೆಟ್ಟಿಗಾರ್, ಕುಶಲ ಎನ್.ಶೆಟ್ಟಿಗಾರ್ ಮತ್ತಿತರರಿದ್ದರು.
ಸೊಸೈಟಿ ಅಧ್ಯಕ್ಷ ಪುರಂದರ ಡಿ.ಶೆಟ್ಟಿಗಾರ್ ಸ್ವಾಗತಿಸಿದರು. ಧನಂಜಯ ಪಿ.ಶೆಟ್ಟಿಗಾರ್ ವಂದಿಸಿದರು. ಮಂಗಳೂರು ನಾರಾಯಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.