ಅಪ್ಪನ ಹಾದಿಯಲ್ಲಿ ಮಗ! ಮುಂಬೈ ರಣಜಿ ತಂಡಕ್ಕೆ ತೆಂಡುಲ್ಕರ್ ಪುತ್ರ ಅರ್ಜುನ್

sachin arjun web
Published on

ಮುಂಬೈ: ಮುಂಬರುವ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಮೊದಲ 2 ಪಂದ್ಯಗಳಿಗೆ ಮುಂಬೈ ತಂಡ ಪ್ರಕಟಗೊಂಡಿದ್ದು, ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೇ ಮೊದಲ ಬಾರಿಗೆ ಸ್ಥಾನ ಸಂಪಾದಿಸಿದ್ದಾರೆ. ಈ ಮೂಲಕ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದಾರೆ.

41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಆರಂಭಿಕ ಪೃಥ್ವಿ ಷಾ ಮುನ್ನಡೆಸಲಿದ್ದಾರೆ. ಕರ್ನಾಟಕವನ್ನು ಒಳಗೊಂಡ ಸಿ ಗುಂಪಿನಲ್ಲಿರುವ ಮುಂಬೈ ತಂಡ ಜನವರಿ 13ರಿಂದ ಮಹಾರಾಷ್ಟ್ರ ವಿರುದ್ಧ ಕೋಲ್ಕತದಲ್ಲಿ ಮೊದಲ ಪಂದ್ಯ ಆಡಲಿದೆ. ಜನವರಿ 20ರಿಂದ ದೆಹಲಿಯನ್ನು ಎದುರಿಸಲಿದೆ.

ಎಡಗೈ ವೇಗಿಯಾಗಿರುವ 22 ವರ್ಷದ ಅರ್ಜುನ್ ತೆಂಡುಲ್ಕರ್, 2020-21ರ ಸಾಲಿನಲ್ಲಿ ಮುಂಬೈ ಪರ 2 ಟಿ20 ಪಂದ್ಯ ಆಡಿ 2 ವಿಕೆಟ್ ಕಬಳಿಸಿದ್ದರು. ಕಳೆದ ಐಪಿಎಲ್ ವೇಳೆ ಮುಂಬೈ ಇಂಡಿಯನ್ಸ್ ತಂಡದ ಭಾಗವೂ ಆಗಿದ್ದರು. ಯುವ ಆರಂಭಿಕ ಯಶಸ್ವಿ ಜೈಸ್ವಾಲ್, ಆಲ್ರೌಂಡರ್ ಶಿವಂ ದುಬೆ 20 ಆಟಗಾರರ ತಂಡದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net