

ಮಂಗಳೂರು: ಉತ್ತಮ ಸಮಾಜದ ನಿರ್ಮಾಣದ ಶಕ್ತಿ ಮಾಧ್ಯಮಗಳಿಗಿದ್ದು, ಯೋಗ್ಯ ಸಮಾಜವನ್ನು ನಿರ್ಮಿಸುವುದು ಮಾಧ್ಯಮಗಳ ಗುರಿಯಾಗಬೇಕು, ಮುಖ್ಯವಾಗಿ ಈಬಗ್ಗೆ ಯುವಜನರಲ್ಲಿ ಶೈಕ್ಷಣಿಕ ಜಾಗೃತಿ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ದ.ಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡ ಪ.ಗೋ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎಂ. ಇಸ್ಮಾಯಿಲ್ ಕಂಡಕರೆಯವರಿಗೆ ಪ.ಗೋ ಪ್ರಶಸ್ತಿ ವಿತರಿಸಿ ಮಾತನಾಡುತ್ತಿದ್ದರು.
ಮಾಧ್ಯಮ ಗಳು ಪರಂಪರೆಯ ಕೊಂಡಿ ಯಾಗಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರ್ಯ ನಿರ್ವಹಿಸು ತ್ತಾ ಬಂದಿದೆ. ಮಂಗಳೂರು ವಿಶ್ವ ವಿದ್ಯಾನಿಲ ಯದ ಬೆಳವಣೆಗೆಯಲ್ಲಿ ಮಹತ್ವದ ಪಾತ್ರವಹಿಸಿದೆ.ಯುವ ಜನರಲ್ಲಿ ಕಲಿಕೆಯ ಬಗ್ಗೆ ಇರುವ ನಿರಾಸಕ್ತಿಯನ್ನು ದೂರ ಮಾಡಿ ಜಾಗೃತಿ ಮೂಡಿಸಬೇಕಾಗಿದೆ ಎಂದ್ದಾರೆ.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಹಿರಿಯ ಪತ್ರಕರ್ತ ದಿವಂಗತ ಪದ್ಯಾಣ ಗೋಪಾಲಕೃಷ್ಣರ ಒಡನಾಟದ ಬಗ್ಗೆ ಮಾತನಾಡಿ ಪತ್ರಕರ್ತರು ವರ್ತಮಾನ ಕಾಲದಲ್ಲಿದ್ದು ಭೂತಕಾಲದ ಜ್ಞಾನದೊಂದಿಗೆ ಭವಿಷ್ಯದ ಚಿಂತನೆ ಹೊಂದಿರಬೇಕಾದ ಅಗತ್ಯವಿದೆ ಎಂದರು.
ದ.ಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ ಬಂಟ್ವಾಳ,ಪದ್ಯಾಣ ಗೋಪಾಲಕೃಷ್ಣರವರ ಪುತ್ರ ವಿಶ್ವೇಶ್ವರ ಭಟ್, ಮ್ಯಾಮ್ನ ಗೌರವಾಧ್ಯಕ್ಷ ವೇಣು ಶರ್ಮ, ದಕ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ನಿರೂಪಿಸಿದರು.
------------------
ವಿಜಯವಾಣಿ ಓದುವ ಹವ್ಯಾಸ ಪತ್ರಿಕೋದ್ಯಮಕ್ಕೆ ಪ್ರೇರಣೆ
ಪ.ಗೋ ಪ್ರಶಸ್ತಿ ವಿಜೇತ ವಾರ್ತಾಭಾರತಿ ಪತ್ರಿಕೆಯ ವಿಶೇಷ ವರದಿಗಾರ ಇಸ್ಮಾಯಿಲ್ ಕಂಡಕೆರೆ ಮಾತನಾಡಿ, ವಿಜಯವಾಣಿ ಪತ್ರಿಕೆಯಲ್ಲಿ ಮೊಟ್ಟೆ ದರ ತಿಳಿಯಲು ಪತ್ರಿಕೆ ಖರೀದಿಸುತ್ತಿದ್ದೆ. ವಿಜಯವಾಣಿ ಪತ್ರಿಕೆ ಪತ್ರಿಕೆ ಓದುವ ಹವ್ಯಾಸ ಬೆಳೆದು ಮುಂದೆ ಪತ್ರಕರ್ತನಾಗಿ ದುಡಿಯಲು ಇದೇ ಹವ್ಯಾಸ ದಾರಿಯಾಯಿತು. ಹಲವು ಅನಿವಾರ್ಯತೆಗಳ ಮಧ್ಯೆ ನಾನು ಪತ್ರಿಕೋದ್ಯಮಕ್ಕೆ ಬಂದೆ. ಇಂದು ಪತ್ರಿಕೆಗಳು ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂದರು.