ಸೆಖೆ ಎಂದು ಮನೆ ಮಾಳಿಗೆ ಮೇಲೆ ಮಲಗುತ್ತಿರಾ? ಹಾಗಾದ್ರೆ ಈ ಸುದ್ದಿ ನೀವು ಓದಲೇಬೇಕು!

xcbxcv
Published on

ದೇವನಹಳ್ಳಿ: ನೀವು ಸೆಖೆ ಎಂದು ಮನೆ ಮಾಳಿಗೆ ಮೇಲೆ ಮಲಗುತ್ತೀರಾ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಈ ಮನೆ ಮಾಲೀಕರು ಸೆಕೆ ಎಂದು ತಮ್ಮ ಮನೆ ಮೇಲೆ ಮಲಗಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಮಾಲೀಕರು ಮನೆ ಮೇಲೆ ಮಲಗಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು ನೆಯಲ್ಲಿದ್ದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ನಡೆದದ್ದು ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ.

ವಿಜಯಪುರ ಪಟ್ಟಣದ ಸೀನಪ್ಪ ಎಂಬುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು 100 ಗ್ರಾಂ ಚಿನ್ನ 150 ಗ್ರಾಂ ಬೆಳ್ಳಿ ಸೇರಿದಂತೆ 10 ಲಕ್ಷ ಮೌಲ್ಯದ ಹಣ ಆಭರಣ ದೋಚಿ ಪರಾರಿಯಾಗಿದ್ದಾರೆ. ಮನೆ ಮಾಲೀಕರು ಹಾಗೂ ಕುಟುಂಬಸ್ಥರು ಬೆಳಗ್ಗೆ ಎದ್ದು ಮನೆಯೊಳಗೆ ಕಾಲಿಟ್ಟಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net