More

    ಮೊರ್ಬಿ ದುರ್ಘಟನೆಯನ್ನು ‘ಆ್ಯಕ್ಟ್​ ಆಫ್​ ಗಾಡ್​’ ಎಂದು ಕರೆದ ಒವೆರಾ ಕಂಪೆನಿ ಮ್ಯಾನೇಜರ್​!

    ಮೊರ್ಬಿ: ಗುಜರಾತ್​ನ ಮೊರ್ಬಿಯಲ್ಲಿ ನಡೆದ ಸೇತವೆ ಕುಸಿತದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

    ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ಸೇತುವೆಗೆ ಕಟ್ಟಲಾಗಿದ್ದ ಕೇಬಲ್​ಗಳು ತುಕ್ಕು ಹಿಡಿದಿದ್ದು ನೆಲದ ಹಾಸನ್ನು ಮಾತ್ರವೇ ಬದಲಿಸಲಾಗಿತ್ತು. ಅಗತ್ಯವಿದ್ದಲ್ಲಿ ಗ್ರೀಸಿಂಗ್​ ಕೂಡ ಮಾಡಿರಲಿಲ್ಲ ಎಂದು ಬೆಳಕಿಗೆ ಬಂದಿದೆ. ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಒವೆರಾ ಕಂಪನಿ ಗಿಟ್ಟಿಸಿಕೊಂಡಿತ್ತು.

    ‘ಒವೆರಾ ಕಂಪೆನಿಯ ಬಂಧಿತ ಮ್ಯಾನೇಜರ್, ಈ ದುರ್ಘಟನೆಯನ್ನು ‘ಆ್ಯಕ್ಟ್​ ಆಫ್​ ಗಾಡ್​’ ಎಂದು ಕರೆದಿದ್ದಾರೆ’ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಈ ಮಾಹಿತಿಯನ್ನು ನೀಡಿದ್ದಾರೆ. ಒವೆರಾ ಕಂಪನಿಯ ಇಬ್ಬರು ಮ್ಯಾನೇಜರ್​ರನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರು ಈ ಹೇಳಿಕೆಯನ್ನು ನೀಡಿದ್ದಾರೆ.

    ಇಂದು ಪೊಲೀಸ್ ಕಸ್ಟಡಿಗೆ ಕಳುಹಿಸಲಾದ ಆರೋಪಿಗಳ ವಿವರವನ್ನು ಕೇಳಿದಾಗ ವಕೀಲ ಪಾಂಚಾಲ್, ‘ಬಂಧಿತರಲ್ಲಿ ಇಬ್ಬರು ಒರೆವಾ ಕಂಪನಿಯಲ್ಲಿ ಮ್ಯಾನೇಜರ್‌ಗಳು. ಇನ್ನಿಬ್ಬರು ಸೇತುವೆಯ ಫ್ಯಾಬ್ರಿಕೇಶನ್ ಕೆಲಸ ಮಾಡಿದವರು. ಉಳಿದ ಐವರು ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿಗಳಾಗಿದ್ದರು’ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts