ಇಂಡಿ: ಗ್ರಾಮೀಣ ರಸ್ತೆಗಳು ಸಂಪೂರ್ಣ ಹಳ್ಳ ಹಿಡಿದಿದ್ದು, ಆಳೆತ್ತರದ ಗುಂಡಿಗಳಿಂದಾವೃತ್ತಗೊಂಡಿವೆ. ಹೀಗಾಗಿ ಸುಗಮ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದು, ಸರ್ಕಾರದ ವಿರುದ್ಧ ವಿನೂತನವಾಗಿ ಹೋರಾಟ ಆರಂಭಿಸಿರುವ ಕಾರ್ಯಕರ್ತರು ಮಂಗಳವಾರ ಗುಂಡಿಗಳಲ್ಲಿ ಹೂ ಚೆಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇಂಡಿ ನಗರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಇಂಥದ್ದೊಂದು ವಿನೂತನ ಹೋರಾಟ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ಇಡೀ ತಾಲೂಕಿನಲ್ಲಿ ರಸ್ತೆಗಳು ಹಾಳಾಗಿವೆ. ಜನ ಹಿಡಿಶಾಪ ಹಾಕುತ್ತಿದ್ದಾರೆ. ಇದೀಗ ಮಳೆಯಿಂದಾಗಿ ತೊಂದರೆ ಉಲ್ಭಣಿಸಿದೆ. ಜೀವ ಅಂಗೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಅಶೋಕ ಜಾಧವ, ರಾಜ್ಯ ಸಂಘಟನಾ ಕಾರ್ಯದರ್ಶಿ ಗಣಪತಿ ರಾಠೋಡ, ಚಂದ್ರಕಾಂತ ನಗರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ, ಕಾರ್ಯದರ್ಶಿ ಸುರೇಶ ನಿಂಬೊಣಿ, ಅಣ್ಣಪ್ಪ ಪೂಜಾರಿ, ನಾಗೇಶ ಸರಸಂಬಿ, ಮಲ್ಲು ಬಿರಾದಾರ. ರಂಜಾನ್ ಕೊಂಕಣಿ, ರಾಜು ಮತ್ತಿತರರಿದ್ದರು.