ಜಾಮೀನಿನ ಮೇಲೆ ಹೊರಬಂದು, ದೆಹಲಿ ಪೊಲೀಸರಿಗೆ ಸವಾಲಾಗಿರುವ ಗ್ಯಾಂಗ್​ಸ್ಟರ್!

gangster
Published on

ನವದೆಹಲಿ : ಕಳೆದ ವರ್ಷ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಗ್ಯಾಂಗ್​ಸ್ಟರ್​ ಒಬ್ಬ ಇದೀಗ ದೆಹಲಿ ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದಾನೆ. ಹಲವು ಕೊಲೆ ಪ್ರಕರಣಗಳಲ್ಲಿ ಅವನು ಭಾಗಿಯಾಗಿರುವ ಸುಳಿವು ಸಿಕ್ಕಿದ್ದು, ಪೊಲೀಸರು ಅವನನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.

ದಕ್ಷಿಣ ದೆಹಲಿಯ ನಿವಾಸಿಯಾದ ಶಾಹ್​ರುಖ್ ಎಂಬಾತನೇ ಆ ವಾಂಟೆಡ್​​ ಕ್ರಿಮಿನಲ್. ಈತ ಹಲವು ಕೊಲೆಗಳು, ಕೊಲೆ ಯತ್ನ ಮತ್ತು ಒಂದು ಗ್ಯಾಂಗ್ ವಾರ್​ನಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋ ಒಂದರಲ್ಲಿ ಮದುವೆ ಸಮಾರಂಭದಲ್ಲಿ ಮಕ್ಕಳು ಮತ್ತು ಇತರರ ಮಧ್ಯೆ ನಿಂತು ಶಾಹ್​ರುಖ್​, ಗಾಳಿಯಲ್ಲಿ ಮೂರ್ನಾಲ್ಕು ಬಾರಿ ಗುಂಡು ಹಾರಿಸಿದ್ದುದು ಬೆಳಕಿಗೆ ಬಂದಿತ್ತು.

ಪೂರ್ವ ದೆಹಲಿಯಲ್ಲಿ ಗ್ಯಾಂಗ್​ ವಾರ್​ ಒಂದರಲ್ಲಿ ಹಲವು ರೌಂಡ್​ಗಳ ಗುಂಡುಗಳನ್ನು ಹಾರಿಸಿದ್ದ ಎನ್ನಲಾದ ಶಾಹ್​ರುಖ್​, ಹಾಲಿ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಹಶೀಂ ಬಾಬಾನ ಹತ್ತಿರದ ಸಹಚರನಾಗಿದ್ದಾನೆ. ಈತನನ್ನು ಶೀಘ್ರವಾಗಿ ಬಂಧಿಸಲು ದೆಹಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net