ನಮ್ಮಲ್ಲಿರುವ 5 ರೂ. ಪಾರ್ಲೆ-ಜಿ ಬಿಸ್ಕತ್,​​ ಯುದ್ಧ ಪೀಡಿತ ಗಾಜಾದಲ್ಲಿ 2,400 ರೂ.ಗೆ ಮಾರಾಟ! | Parle-G

dk - 2025-06-06T170905.979
Published on

Parle-G: ಭಾರತದಲ್ಲಿ ಚಿಕ್ಕ ಮಕ್ಕಳಿಗೂ ಇಷ್ಟವಾಗುವ ಬಿಸ್ಕತ್​ ಎಂದ್ರೆ ಅದು ಮನೆ-ಮನೆ ಮಾತಗಿರುವ ಪಾರ್ಲೆ-ಜಿ. ಇದೀಗ ಈ ಬಿಸ್ಕತ್​ ಆಹಾರದ ಕೊರತೆಯು ತೀವ್ರ ಕ್ಷಾಮವಾಗಿ ಮಾರ್ಪಟ್ಟಿರುವ ಯುದ್ಧಪೀಡಿತ ಗಾಜಾದಲ್ಲಿ, ಅವುಗಳನ್ನು ಅವುಗಳ ಮೂಲ ಬೆಲೆಗಿಂತ ಸುಮಾರು 500 ಪಟ್ಟು ಹೆಚ್ಚು ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಹೌದು, ಗಾಜಾದಿಂದ ಇತ್ತೀಚಿಗೆ ವೈರಲ್​ ಆದ ಪೋಸ್ಟ್​​ವೊಂದರಲ್ಲಿ ಮುಂಬೈ ಪ್ರಧಾನ ಕಚೇರಿಯನ್ನು ಹೊಂದಿರುವ ಪಾರ್ಲೆ ಪ್ರಾಡಕ್ಟ್ಸ್ ತಯಾರಿಸಿದ ಪಾರ್ಲೆ ಜಿ ಬಿಸ್ಕತ್ತುಗಳನ್ನು 24 ಯುರೋಗಳಿಗೂ (ರೂ. 2,342) ಮಾರಾಟ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಈಗಾಗಿ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಅಗ್ಗದ ಆಹಾರಗಳಲ್ಲಿ ಒಂದಾಗಿರುವ ಬಿಸ್ಕತ್ತುಗಳ ಬೆಲೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಗೊಂದಲಕ್ಕೊಳಗಾಗಿದ್ದಾರೆ.

ವೈರಲ್​ ಆದ ಪೋಸ್ಟ್​​ನಲ್ಲೇನಿದೆ..? ''ದೀರ್ಘ ಕಾಯುವಿಕೆ ನಂತರ ನಾನು ಇಂದು ರವೀಫ್​​ಗೆ(ಮಗಳು) ಹೆಚ್ಚಿನ ಬಿಸ್ಕತ್​ಗಳನ್ನು ಕೊಂಡೆ. ಬಿಸ್ಕತ್​​ ಬೆಲೆ 1.5 ಯುರೋಗಳಿಂದ 24 ಯುರೋಗಳಿಗೆ ಏರಿದ್ದರೂ, ರವೀಫ್​ಗೆ ಅದನ್ನು ಕೊಂಡುಕೊಳ್ಳದೆ ಇರಲಾರೆ. ಇದು ಇವಳಿಗೆ ಅವಶ್ಯಕತೆ ಇದೆ'' ಎಂದು ಮೊಹಮ್ಮದ್​​ ಜಾವೇದ್​ ಎಂಬಾತ ಪೋಸ್ಟ್​ವೊಂದನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

ಬೆಲೆ ಏರಿಕೆಗೆ ಕಾರಣ..? ಪ್ಯಾಲೆಸ್ತೆನಿ(ಗಾಜಾಪಟ್ಟಿ) ಹಾಗೂ ಇಸ್ರೇಲ್​​ ರಾಷ್ಟ್ರಗಳ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಿದೆ. ಇದರ ನಡುವೆ ಮೂರು ತಿಂಗಳಿಗೂ ಹೆಚ್ಚಿನ ಕಾಲ ಗಡಿ ಮುಚ್ಚಿರುವುದರಿಂದ 2 ಮಿಲಿಯನ್​ ಜನರ ಅಗತ್ಯತೆಗಳನ್ನು ಪೂರೈಸಲಾಗುತ್ತಿಲ್ಲ. ಆದ್ದರಿಂದ ಕೆಲವು ಜನರು ಕೆಲ ವಸ್ತುಗಳನ್ನು ಪಡೆಯಲು ಲೂಟಿ ಮಾಡಲಾಯಿತು. ಹೀಗಾಗಿ, ಈ ಆಹಾರಗಳನ್ನು ಅತಿ ಹೆಚ್ಚು, ಕೈಗೆಟುಕಲಾಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಉಲ್ಲೇಖಿಸಿದೆ.

ಜೂನ್ 6, 2025 ರ ಹೊತ್ತಿಗೆ ಗಾಜಾದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆಗಳು..

1 ಕೆಜಿ ಸಕ್ಕರೆ: 4,914 ರೂ.

1 ಲೀಟರ್ ಅಡುಗೆ ಎಣ್ಣೆ: 4,177 ರೂ.

1 ಕೆಜಿ ಆಲೂಗಡ್ಡೆ: 1,965 ರೂ.

1 ಕೆಜಿ ಈರುಳ್ಳಿ: 4,423 ರೂ.

1 ಕಾಫಿ ಕಪ್: 1,800 ರೂ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net