ಮಂಜೇಶ್ವರ ಪೊಲೀಸರಿಂದ ಅನಾಥನ ಆರೈಕೆ

aaraike
Published on

ಮಂಜೇಶ್ವರ: ಮಂಜೇಶ್ವರದ ಬೀದಿಯಲ್ಲಿ ಹೊಟ್ಟೆಗೆ ಏನೂ ಲಭಿಸದೆ ಅನಾಥವಾಗಿ ತಿರುಗಾಡುತ್ತಿದ್ದ ಕರ್ನಾಟಕದ ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆತಂದು, ಆತನಿಗೆ ಆಹಾರ ನೀಡಿ ಪೊಲೀಸ್ ಅಧಿಕಾರಿಗಳು ಹಾಗೂ ಜೀಪು ಚಾಲಕ ಮಾದರಿಯಾಗಿದ್ದಾರೆ.

ಶನಿವಾರ ಬೆಳಗ್ಗೆ ಮಂಜೇಶ್ವರದ ಎಸ್‌ಐ ನಿಖಿಲ್ ಹಾಗೂ ಚಾಲಕ ಪ್ರಶೋಬ್ ಹೊಟ್ಟೆಗೆ ಏನೂ ಲಭಿಸದೆ ಹಸಿವಿನಿಂದ ಬೀದಿಯಲ್ಲಿ ಬಿದ್ದಿದ್ದ ಕರ್ನಾಟಕ ನಿವಾಸಿಯಾದ ಅಪರಿಚಿತ ವ್ಯಕ್ತಿಯನ್ನು ಠಾಣೆಗೆ ಕರೆ ತಂದು ಆ ವ್ಯಕ್ತಿಯನ್ನು ವಿಚಾರಿಸಿದ ಬಳಿಕ, ಆತನಿಗೆ ಮನೆ ಕುಟುಂಬ ಇಲ್ಲವೆಂಬುದು ತಿಳಿದುಬಂದಿದೆ. ಆತನಿಗೆ ಆಹಾರ ದೊರಕದೇ ಬಹಳ ಕಾಲ ಕಳೆದಿರುವುದನ್ನು ಮನಗಂಡ ಎಸ್‌ಐ ಹಾಗೂ ಚಾಲಕ ಆಹಾರ ನೀರು ತಂದು ಆತನ ಹೊಟ್ಟೆ ತುಂಬಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಕಂಡು ಅಲ್ಲೇ ಇದ್ದ ಎಎಸ್ಸೈ ಇಸ್ಮಾಯಿಲ್ ಕೂಡಾ ಕೈ ಜೋಡಿಸಿದ್ದಾರೆ. ಅನಾಥನ ಸ್ಥಿತಿ ಮನಗಂಡ ಪೊಲೀಸರು ಆತನ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ಮೂಲಕ ಪರಿಶೀಲನೆ ನಡೆಸಿ ಅನಾಥಾಲಯಕ್ಕೆ ಒಪ್ಪಿಸಲಾಗುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net