

ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಫೆ.28ರಂದು ಬೆಳಗ್ಗೆ 9ಗಂಟೆಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ಕ್ರೀಡಾಕೂಟ ಆಯೋಜಿಸಲಾಗಿದೆ.
ಹಗ್ಗ-ಜಗ್ಗಾಟ(ಒಂದು ಗುಂಪಿಗೆ 10 ಮಹಿಳೆಯರಿಗೆ ಮಾತ್ರ), ಥ್ರೋಬಾಲ್(ಒಂದು ಗುಂಪಿಗೆ 10 ಮಹಿಳೆಯರಿ ಮಾತ್ರ), ಮ್ಯೂಸಿಕಲ್ ಛೇರ್, ಸ್ಲೋ ಸ್ಕೂಟರ್ ರೇಸ್, ಬಿಂದಿಗೆ ಹಿಡಿದು ಓಟ, ಲೆಮನ್ ಆ್ಯಂಡ್ ಸ್ಪೂನ್(19 ರಿಂದ 45 ವರ್ಷ ಮತ್ತು 46 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆ) ನಡೆಯಲಿದೆ. ವಿಜೇತರಿಗೆ ನಗದು ಬಹುಮಾನದ ಜತೆಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.