ರಸ್ತೆಯಲ್ಲಿಯೇ ಕೆಟ್ಟು ನಿಂತ ವಿಪಕ್ಷ ನಾಯಕನ ಎಲೆಕ್ಟ್ರಿಕ್​ ಕಾರು; ರಿಪೇರಿ ಅಂಗಡಿಗೆ ಕರೆದೊಯ್ದ ಎತ್ತಿನಬಂಡಿ: ವಿಡಿಯೋ ವೈರಲ್​ | Bullock cart

dk (75)
Published on

ರಾಜಸ್ಥಾನ: ರಾಜಸ್ಥಾನದ ವಿರೋಧ ಪಕ್ಷದ ನಾಯಕನ ಎಲೆಕ್ಟ್ರಿಕ್​ ಕಾರು ರಸ್ತೆಯ ಮಧ್ಯಲ್ಲಿಯೇ ಕೆಟ್ಟುನಿಂತ ಹಿನ್ನೆಲೆ ಸ್ಥಳದಲ್ಲಿಯೇ ಇದ್ದ ರೈತರು ಎತ್ತಿನಬಂಡಿ(Bullock cart) ಮೂಲಕ ಕಾರನ್ನು ರಿಪೇರಿಗೆ ಕರೆದೊಯ್ದ ಘಟನೆಯ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಇಲ್ಲಿನ ದೀದ್ವಾನ ಜಿಲ್ಲೆಯ ಕುಚಮನ್​ ನಗರದ ಪುರಸಭೆಯ ವಿರೋಧ ನಾಯಕ ಅನಿಲ್​ ಸಿಂಗ್​ ಮೆಡ್ತಿಯಾ ಅವರ ಎಲೆಕ್ಟ್ರಿಕ್​ ಕಾರು ಎಂದು ಹೇಳಲಾಗಿದೆ. ಮೆಡ್ತಿಯಾ ಅವರು ನಗರದಿಂದ ದೀದ್ವಾನ ಜಿಲ್ಲೆಗೆ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದರು. ಏಕಾಏಕಿ ಕಾರು ಕೈಕೊಟ್ಟಿದೆ. ಕಾರು ಮರು ಚಾಲನೆಗೆ ಬೇಕಾದ ಎಲ್ಲ ಪ್ರಯತ್ನಗಳನ್ನು ಅನಿಲ್​ ಸಿಂಗ್​ ಮಾಡಿದ್ದಾರೆ. ಆದರೆ ಅವರ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಇದನ್ನರಿತ ಸ್ಥಳದಲ್ಲಿಯೇ ಇದ್ದ ರೈತರು ತಮ್ಮ ಎತ್ತಿನಗಾಡಿಗೆ ಕಾರ್​ ಬ್ಯಾನೆಟ್​ ಕಟ್ಟಿ ರಿಪೇರಿ ಅಂಗಡಿಗೆ ತಂದಿದ್ದಾರೆ.

ವಿಡಿಯೋ ಭಾರಿ ವೈರಲ್​

ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕಾರನ್ನು ದೇಶಿ ಸಾಂಪ್ರದಾಯಿಕ ಎತ್ತಿನಬಂಡಿ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ನೋಡುಗರನ್ನು ಗಮನ ಸೆಳೆದಿದೆ. ಅಲ್ಲದೆ, ಕೆಲವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ಈ ದೃಶ್ಯದ ಕ್ಲಿಪ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದಕ್ಕೆ ಇದೀಗ ನಟ್ಟಿಗರು ಹಾಸ್ಯಮಯ ಮತ್ತು ವಿಭಿನ್ನ ಪ್ರತಿಕ್ರಿಯೆಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net