ನೇತ್ರಶಾಸ್ತ್ರ ವೈದ್ಯಕಿಯ ಪಠ್ಯಕ್ರಮ ಬಿಡುಗಡೆ

udp-4-kmc
Published on

ಉಡುಪಿ: ನೇತ್ರಶಾಸ್ತ್ರ ಭಾರತೀಯ ಸಾಮರ್ಥ್ಯ-ಆಧಾರಿತ ವೈದ್ಯಕಿಯ ಪಠ್ಯಕ್ರಮ ನೇತ್ರವಿಜ್ಞಾನದಲ್ಲಿ ಇಡೀ ಶೈಕ್ಷಣಿಕ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಈ ಪುಸ್ತಕದ ಸ್ಪಷ್ಟತೆ, ಸಮಗ್ರ ವ್ಯಾಪ್ತಿ ಮತ್ತು ಪ್ರಾಯೋಗಿಕ ವಿಧಾನ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮತ್ತು ಕ್ಲಿನಿಕಲ್ ಪಾತ್ರಗಳನ್ನು  ಉತ್ತಮವಾಗಿ ಸಿದ್ಧಪಡಿಸುತ್ತದೆ  ಎಂದು  ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್   ಆರೋಗ್ಯ ವಿಜ್ಞಾನಗಳ ಸಹ ಕುಲಪತಿ  ಡಾ. ಶರತ್ ಕುಮಾರ್ ರಾವ್ ಹೇಳಿದರು.

ಕ್ಯಾಂಪಸ್ನಲ್ಲಿರುವ ಇಂಟರಾಕ್ಟ್ ಲೆಕ್ಚರ್ ಹಾಲ್ ನಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ವತಿಯಿಂದ ಎಸೆನ್ಷಿಯಲ್ಸ್ ಆಫ್ ಒಪ್ತಾಲ್ಮೊಲೋಜಿ : ಭಾರತೀಯ ಸಾಮರ್ಥ್ಯ ಆಧಾರಿತ ವೈದ್ಯಕಿಯ ಪಠ್ಯಕ್ರಮದ -ಪುಸ್ತಕ ಬಿಡುಗಡೆ  ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಸ್ತೂರ್ಬಾ  ವೈದ್ಯಕಿಯ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಣಿಪಾಲದ ಕೆಎಂಸಿಯ ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಉಸ್ತುವಾರಿ ಮುಖ್ಯಸ್ಥೆ ಡಾ.ಶೈಲಜಾ ಉಪಸ್ಥಿತರಿದ್ದರು. ಮಣಿಪಾಲದ ಕೆಎಂಸಿ ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸುಲತಾ ವಿ.ಭಂಡಾರಿ ಅವರು ಪಠ್ಯಪುಸ್ತಕದ ಒಳನೋಟದ ಅವಲೋಕನ ನೀಡಿದರು.  ಡಾ.ವಿಜಯ ಪೈ ಎಚ್., ಡಾ.ಲಾವಣ್ಯ ಜಿ.ರಾವ್, ಮತ್ತು ಡಾ.ಉಮಾ ಕುಲಕರ್ಣಿ ಮಾತನಾಡಿದರು.  ಮಣಿಪಾಲದ ಕಸ್ತೂರಬಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯ ಸಹ ಪ್ರಾಧ್ಯಾಪಕಿ ಡಾ.ಮನಾಲಿ ಹಜಾರಿಕಾ ಕಾರ್ಯಕ್ರಮ ನಿರೂಪಿಸಿದರು. ವೋಲ್ಟರ್ಸ್ ಕ್ಲುವರ್ ಅವರು ಪ್ರಕಟಿಸಿದ ಪಠ್ಯಪುಸ್ತಕವನ್ನು ಡಾ. ಸುಲತಾ ವಿ. ಭಂಡಾರಿ, ಡಾ. ವಿಜಯ ಪೈ ಎಚ್, ಡಾ. ಲಾವಣ್ಯ ಜಿ. ರಾವ್ ಮತ್ತು ಡಾ. ಉಮಾ ಕುಲಕರ್ಣಿ ಪುಸ್ತಕ ಬರೆದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net