

ವಿಜಯವಾಣಿ ಸುದ್ದಿಜಾಲ ಉಡುಪಿ
ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳಿಂದಲೂ ಗಮನ ಸೆಳೆಯುವ ಉಡುಪಿ ತಾಲೂಕಿನ ಪರ್ಕಳದ ವಾಲಿಬಾಲ್ ಫ್ರೆಂಡ್ಸ್ ಸಂಘಟನೆಯು ಈ ಬಾರಿಯ ದೀಪಾವಳಿಯನ್ನು ವಿಜಯದ ಸ್ಮರಣೆಯೊಂದಿಗೆ ಆಚರಿಸುತ್ತಿದೆ.
ಎಲ್ಲರಲ್ಲೂ ಸಂಭ್ರಮ ಹೆಚ್ಚಿಸುವ ಬೆಳಕಿನ ಹಬ್ಬ ದಿಪಾವಳಿಯ ಈ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸಿದ್ದ ಆಪರೇಷನ್ ಸಿಂಧೂರದ ವಿಜಯವನ್ನು ಬೃಹತ್ ಆಕಾಶದೀಪದೊಳಗಿನ ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ.