ಭಾರತೀಯ ಸೈನಿಕರಿಗೆ ಬೆಂಬಲ

udp-7-olakadu 1
Published on

ಉಡುಪಿ: ಪೆಹಲಗಾಮ್ ಹತ್ಯಾಕಾಂಡ ವಿರುದ್ಧ ಭಾರತೀಯ ಸೇನೆ ರಾತ್ರೋರಾತ್ರಿ ಆಪರೇಷನ್ ಸಿಂಧೂರ ಹೆಸರಿನ ಕಾರ್ಯಾಚರಣೆ ನಡೆಸಿ ಉಗ್ರರಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಈ ನಿಟ್ಟಿನಲ್ಲಿ ನಾಗರಿಕರ ಪರವಾಗಿ ಸೇನೆಗೆ ಗೌರವ ಸೂಚಿಸುತ್ತೇವೆ. ಸೈನಿಕರಿಗೆ ಬೆಂಬಲ ನೀಡುತ್ತೇವೆ ಎಂದು ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಹೇಳಿದರು.

ಚಿತ್ತರಂಜನ್ ಸರ್ಕಲ್ ಬಳಿ ಆಪರೇಷನ್ ಸಿಂಧೂರ ಕಾರ್ಯಚರಣೆ ಬೆಂಬಲಿಸಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ನಡೆದ ಮೆರವಣಿಗೆಯಲ್ಲಿ ಅವರು ಮಾತನಾಡಿದರು. ೨೦*೧೪ ಉದ್ದದ ಬೃಹತ್ ರಾಷ್ಟçಧ್ವಜವನ್ನು ಹಿಡಿಕೊಂಡು ಮೆರವಣಿಗೆ ನಡೆಸಲಾಯಿತು. ಸಮಿತಿಯ ಪ್ರಮುಖರಾದ ತಾರನಾಥ ಮೇಸ್ತ, ರಾಜೇಶ್ ಶೇಟ್, ಸುಧಾಕರ್, ವಿನಾಯಕ ಹೆಗ್ಡೆ ಮಿತ್ರ ನರ್ಸಿಂಗ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭೆ ಬಳಿಕ ನಾಗರಿಕರಿಗೆ ಸಿಹಿ ಹಂಚಲಾಯಿತು.

ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಚರಣೆ ನಡೆಸಿದೆ. ದೇಶದ ಸೈನ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದೇನೆ. ಹಿಂದೂ ಮಹಿಳೆಯರ ಸಿಂಧೂರ ಅಳಿಸಿದ ಉಗ್ರರ ಅಡಗುದಾಣಗಳ ಮೇಲಿನ ಮಿಲಿಟರಿ ದಾಳಿಗೆ ಪ್ರಶಂಸೆ ವ್ಯಕ್ತಪಡಿಸುವೆ. ಭಾರತವನ್ನು ಕೆಣಕಿದ್ರೆ ತಕ್ಕ ಉತ್ತರವಿದೆ ಎಂಬುದನ್ನು ಸೇನೆ ತೋರಿಸಿದೆ. ದೇಶ ಒಗ್ಗಟ್ಟಾಗಬೇಕು. ಎಲ್ಲಾ ಜಾತಿ, ಧರ್ಮೀಯರು ಸೇನೆಗೆ ಬೆಂಬಲ ನೀಡಬೇಕು.

-ಅಶ್ವಿನಿ, ಗೃಹಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net