

ಚಿಕ್ಕಬಳ್ಳಾಪುರ: ಅಲ್ಲಲ್ಲಿ ಭಾರಿ ಸಿಡಿತದ ಶಬ್ದ, ಹೊತ್ತಿ ಉರಿದ ಬೆಂಕಿ, ವಾಹನದ ಸೈರನ್, ಹಲವರನ್ನು ಬಂಧಿಸಿ ಹೆಡೆಮುರಿ ಕಟ್ಟಿದ ಪಡೆ, ಕಟ್ಟಡದಲ್ಲಿ ಸಿಲುಕಿಕೊಂಡವರ ರಕ್ಷಣೆ....
ಇವು ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಗೃಹರಕ್ಷಕ ದಳ ಸೇರಿ ವಿವಿಧ ಇಲಾಖೆಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಂಡಿದ್ದ ಮಾಕ್ ಡ್ರಿಲ್ ನಲ್ಲಿ ಕಂಡುಬಂದ ದೃಶ್ಯಗಳು.
ಸಂಜೆ ಒಂದೆಡೆ ಆಗಸದಲ್ಲಿ ಸೂರ್ಯ ಮುಳುಗುತ್ತಿದ್ದರೆ, ಮತ್ತೊಂದೆಡೆ ನಗರದ ಪ್ರಮುಖ ರಸ್ತೆಗಳಲ್ಲಿ ಬುಲೆಟ್ ಸದ್ದು, ವಾಹನಗಳ ಓಡಾಟ, ಬೆಂಕಿ ಅವಡ, ಜನರ ರಕ್ಷಣೆಯ ಜಾಗೃತಿ ಕಾರ್ಯಾಚರಣೆ ನಡೆಯಿತು. ಇದನ್ನು ಅಧಿಕಾರಿಗಳ ಜತೆಗೆ ಸ್ಥಳಿಯ ಜನರು ಕುತೂಹಲದಿಂದ ವೀಕ್ಷಿಸಿದರು.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಅದರಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯೋತ್ಪಾದಕರು ವಾಹನಗಳಲ್ಲಿ ಕುಳಿತು ಬಾಂಬ್ ಎಸೆಯುತ್ತ, ಸುತ್ತಲಿನ ಜನರ ಮೇಲೆ ಗುಂಡಿನ ಸುರಿಮಳೆಗೈದರು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸೈರನ್ ಹಾಕಿಕೊಂಡು ವಾಹನವನ್ನು ಹಿಂಬಾಲಿಸಿದರು. ಅರ್ಧದಾರಿಯಲ್ಲಿಯೇ ಭಯೋತ್ಪಾದಕರನ್ನು ಅಡ್ಡಗಟ್ಟಿ ಬಂಧಿಸಿದರು. ಅಗ್ನಿಶಾಮಕ ದಳವು ಸ್ಥಳಕ್ಕೆ ಬಂದು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿತು. ಹಾಗೆಯೇ ಅವಡದ ಕಟ್ಟಡಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ರಸಿತು. ಇನ್ನು ಗಾಯಾಳುಗಳಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ, ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಿಬ್ಬಂದಿ ಸಾಗಿಸಿದರು. ಟನೆಯ ಸ್ಥಳದಲ್ಲಿ ಸೈನಿಕರು ಬಿಗಿ ಭದ್ರತೆಯನ್ನು ಕೈಗೊಂಡರು