More

    ಸಾಲ್ಟ್ ಶತಕ, ವಿಂಡೀಸ್‌ಗೆ ಆಂಗ್ಲರ ತಿರುಗೇಟು: ಐಪಿಎಲ್ ಹರಾಜಿಗೂ ಮುನ್ನ ಮಿಂಚಿದ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್

    ಗ್ರೇನಡ: ಆರಂಭಿಕ ಫಿಲ್ ಸಾಲ್ಟ್ (109 * ರನ್, 56 ಎಸೆತ, 4 ಬೌಂಡರಿ, 9 ಸಿಕ್ಸರ್) ಚೊಚ್ಚಲ ಶತಕ ಹಾಗೂ ಹ್ಯಾರಿ ಬ್ರೂಕ್ (31*) ಕೊನೇ ಓವರ್‌ನಲ್ಲಿ ನಡೆಸಿದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಆತಿಥೇಯ ತಿರುಗೇಟು ನೀಡಿರುವ ಇಂಗ್ಲೆಂಡ್, 5 ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ಇಳಿಸಿಕೊಂಡಿದೆ.

    ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, ನಿಕೋಲಸ್ ಪೂರನ್ (82 ರನ್, 45 ಎಸೆತ, 6 ಬೌಂಡರಿ, 6 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ 6 ವಿಕೆಟ್‌ಗೆ 222 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಆಂಗ್ಲರು, 19.5 ಓವರ್‌ಗಳಲ್ಲಿ 3 ವಿಕೆಟ್‌ಗೆ 226 ರನ್ ಬಾರಿಸಿ ಯಶಸ್ವಿ ಚೇಸಿಂಗ್ ನಡೆಸಿದರು. ಕೊನೇ ಓವರ್‌ನಲ್ಲಿ 21 ರನ್ ಬೇಕಿದ್ದಾಗ ಹ್ಯಾರಿ ಬ್ರೂಕ್ 3 ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿ ಗೆಲುವು ತಂದರು. ಸರಣಿಯ 4ನೇ ಪಂದ್ಯ ಬುಧವಾರ ತರೌಬಾದಲ್ಲಿ ನಡೆಯಲಿದೆ.

    ವೆಸ್ಟ್ ಇಂಡೀಸ್: 6 ವಿಕೆಟ್‌ಗೆ 222 (ಪೂರನ್ 82, ಶೈ ಹೋಪ್ 26, ಪೊವೆಲ್ 39, ರುದರ್‌ಪೋರ್ಡ್ 29, ಆದಿಲ್ ರಶೀದ್ 32ಕ್ಕೆ2, ಸ್ಯಾಮ್ ಕರ‌್ರನ್ 34ಕ್ಕೆ2). ಇಂಗ್ಲೆಂಡ್: 19.5 ಓವರ್‌ಗಳಲ್ಲಿ 3 ವಿಕೆಟ್‌ಗೆ 226 (ಫಿಲ್ ಸಾಲ್ಟ್ 109*, ಬಟ್ಲರ್ 51, ಲಿವಿಂಗ್ ಸ್ಟೋನ್ 30, ಬ್ರೂಕ್ 31*, ಗುಡಕೇಶ್ ಮೋತಿ 30ಕ್ಕೆ1). ಪಂದ್ಯಶ್ರೇಷ್ಠ: ಫಿಲ್ ಸಾಲ್ಟ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts