ತೆರೆದ ಮ್ಯಾನ್​ಹೋಲ್​: ನಾಗರಿಕರನ್ನು ರಕ್ಷಿಸಲು ಪ್ರಾಣವನ್ನೇ ಪಣಕಿಟ್ಟ ಬಿಎಂಸಿ ಕಾರ್ಮಿಕ! | Manhole

untitled-design-2025-09-15t154008339-68c7e60a4af1d
Published on

Manhole: ಮುಂಬೈನಾದ್ಯಂತ ಭಾರೀ ಮಳೆಯಿಂದಾಗಿ ರಸ್ತೆ, ಚರಂಡಿಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಈ ಸಮಯದಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಮಿಕನೊಬ್ಬ ಭಾರೀ ಮಳೆಯ ನಡುವೆಯೂ ನಾಗರೀಕರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ಈ ವಿಡಿಯೋದಲ್ಲಿ ಬೃಹಮುಂಬೈನಲ್ಲಿ ಆಗುತ್ತಿರುವ ಮಳೆಯನ್ನು ತೋರಿಸಲಾಗಿದೆ. ಇಲ್ಲಿ ರಸ್ತೆಯೊಂದರ ಮೇಲಿರುವ ಮ್ಯಾನ್​ಹೋಲ್​ನ ಮುಚ್ಚಳವು ತೆರೆದಿದ್ದು, ಜೋರಾಗಿ ಮಳೆ ನೀರು ಅದರೊಳಗೆ ಹೋಗುತ್ತಿರುವುದನ್ನು ಗಮನಿಸಿಬಹುದು. ಹಾಗೆಯೇ, ಇಲ್ಲಿ ಕಾರ್ಮಿಕನೊಬ್ಬ ಆ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಮ್ಯಾನ್​ಹೋಲ್​ ಮೇಲೆ ಜನರಿಗೆ ಜಾಗೃತಿ ಮೂಡಿಸಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ವರದಿಗಳ ಪ್ರಕಾರ, ಪ್ರತಿ ಮಳೆಗಾಲದಲ್ಲೂ ತೆರೆದ ಮ್ಯಾನ್​ಹೋಲ್​ಗಳಿಂದ ಅಪಘಾತ ಸಂಭವಿಸುತ್ತವೆ. ಹಾಗೆಯೇ ಮುಂದುವರೆದ ಪಂಪ್‌ಗಳು ಮತ್ತು ಒಳಚರಂಡಿ ಯಂತ್ರೋಪಕರಣಗಳ ಹೊರತಾಗಿಯೂ, ಪಾಲಿಕೆಯ ನೌಕರರು ವೈಯಕ್ತಿಕವಾಗಿ ತೆರೆದ ಮ್ಯಾನ್‌ಹೋಲ್‌ಗಳಲ್ಲಿ ಕುಳಿತು ಜನರಿಗೆ ಸಹಾಯ ಮಾಡಬೇಕು ಎಂಬುದು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ರೈಲು ಸೇವೆಗಳಿಗೆ ತೊಂದರೆ

ಮುಂಬೈನಲ್ಲಾದಂತ ಭಾರೀ ಮಳೆಯಿಂದಾಗಿ ಅಲ್ಲಿನ ನಾಗರೀಕರಿಗಲ್ಲದೇ, ಸ್ಥಳೀಯ ರೈಲುಗಳಿಗೂ ತೊಂದರೆಯಾಗಿದೆ. ರೈಲು ಹಳಿಯ ಮೇಲೆ ಭಾರೀ ನೀರು ನಿಂತಿರುವುದರಿಂದ ಸೇವೆಗಳು ಅಸ್ತವ್ಯಸ್ತವಾಗಿವೆ. ಇನ್ನು ಮಳೆಯಲ್ಲಿ ಸಿಕ್ಕಿಬಿದ್ದ ಜನರು ಅವರ ಮನೆಗಳಿಗೆ ಕಚೇರಿಗಳಿಗೆ ಹೊಗಲು ಹರಸಾಹಸ ಪಟ್ಟಿದ್ದಾರೆ.

ಮುಂಬೈನಲ್ಲಿ ಭಾರೀ ಮಳೆ

ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಿನ ಹಿಂದ್‌ಮಾತಾ, ಕಿಂಗ್ಸ್ ಸರ್ಕಲ್, ಮಾತುಂಗಾ, ಫೈವ್ ಗಾರ್ಡನ್ಸ್ ಮತ್ತು ಹಿಂದೂ ಕಾಲೋನಿಗಳು ಸಂಪೂರ್ಣ ನೀರಿನೊಂದಿಗೆ ಮುಳುಗಿದ್ದು, ಅಲ್ಲಿನ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net