Harbhajan Singh: ಸದಾ ಒಂದಲ್ಲ ಒಂದು ವಿಚಾರದ ಬಗ್ಗೆ ಮನಸೋಇಚ್ಛೆ ನಾಲಿಗೆ ಹರಿಬಿಡುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಇದೀಗ ಮತ್ತೊಂದು ಹೇಳಿಕೆ ಮೂಲಕ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ.

ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಸಲಿ ಅಭಿಮಾನಿ ಬಳಗ ಇರುವುದು. ಉಳಿದ ಆಟಗಾರರೆಲ್ಲರೂ ಹಣ ಕೊಟ್ಟು ಫ್ಯಾನ್ಸ್ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಬಜ್ಜಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಕ್ರಿಕೆಟ್ ಪ್ರಿಯರಿಂದ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
harbhajan singhin-directly Targeted Virat fans? as Paid instagram fans#chinnaswamystadium #RcbvsKkr pic.twitter.com/KYZygETjbP
— 👑 King Kohli Fan Page (@Hracingchannel) May 17, 2025
“ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ಎಂ.ಎಸ್. ಧೋನಿ ಐಪಿಎಲ್‌ನಲ್ಲಿ ಮುಂದುವರಿಯುತ್ತಾರೆ. ನಾನು ಸಿಎಸ್‌ಕೆ ಮಾಲೀಕನಾಗಿದ್ದರೆ, ಖಂಡಿತ ಧೋನಿಯ ಬಗ್ಗೆ ಬೇರೆಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ನನ್ನ ಪ್ರಕಾರ, ನಿಜವಾದ ಅಭಿಮಾನಿಗಳನ್ನು ಹೊಂದಿರುವ ಏಕೈಕ ವ್ಯಕ್ತಿ ಎಂದರೆ ಧೋನಿ. ಉಳಿದವರು ಹಣ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಪೈಕಿ ಬಹುತೇಕರು ಹಣ ಪಡೆದ ಅಭಿಮಾನಿಗಳು, ಅವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ” ಎಂದು ಹರ್ಭಜನ್ ಹೇಳಿದ್ದಾರೆ.
ಇದನ್ನೂ ಓದಿ: ವೈಫಲ್ಯ ತಿದ್ದಿಕೊಳ್ಳಲು ತಹಸೀಲ್ದಾರ್ ಕಚೇರಿಗೆ ಸಿಬ್ಬಂದಿಗೆ ಲೋಕಾಯುಕ್ತರ ಖಡಕ್ ಎಚ್ಚರಿಕೆ
ಸದ್ಯ ಹರ್ಭಜನ್ ಸಿಂಗ್ ಹೇಳಿಕೆಗೆ ಕ್ರಿಕೆಟ್ ಪ್ರೇಮಿಗಳಿಂದ ಜಾಲತಾಣಗಳಲ್ಲಿ ಸಾಲು ಸಾಲು ಟೀಕೆಗಳು ವ್ಯಕ್ತವಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಕೆಲವರು ನಾಲಿಗೆ ಹರಿಬಿಡುವ ಮುನ್ನ ಯೋಚಿಸಿ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಇನ್ನೂ ಕೆಲವರು ಇದು ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಫ್ಯಾನ್ಸ್ ನಂ.18 ಟೆಸ್ಟ್ ಜೆರ್ಸಿ ಧರಿಸಿ ಮೈದಾನಕ್ಕೆ ಬಂದಿದ್ದನ್ನು ಸಹಿಸದೆ ಹರ್ಭಜನ್ ಈ ರೀತಿ ಮಾತನಾಡಿದ್ದಾರೆಯೇ ಎಂಬ ಅನುಮಾನ ಹೊರಹಾಕಿದ್ದಾರೆ,(ಏಜೆನ್ಸೀಸ್).