ಆನ್​​ಲೈನ್​ ಗೇಮಿಂಗ್​ ಮಸೂದೆ: ಡ್ರೀಮ್​​ 11 ಜತೆಗಿನ ಒಪ್ಪಂದ ಕಡಿದುಕೊಂಡ ಬಿಸಿಸಿಐ! | Dream 11

photo (94)
Published on

Dream 11: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್​ ಸಂಸ್ಥೆಯಾದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಕೊನೆಗೂ ಡ್ರೀಮ್​ 11 ಜತೆಗಿನ ಒಪಂದವನ್ನು ಕಳೆದುಕೊಂಡಿದೆ. ಬಿಸಿಸಿಐ ಮತ್ತೆ ಮುಂದೆ (ಭವಿಷ್ಯದಲ್ಲಿ) ಇಂತಹ ಕಂಪನಿಗಳ ಸಹಭಾಗಿತ್ವಕ್ಕೆ ಕೈಜೋಡಿಸಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಸೋಮವಾರ(ಆ.25) ವರದಿಯಾಗಿವೆ.

ಆನ್​​ಲೈನ್​​ ಗೇಮಿಂಗ್​​ ಪ್ರಚಾರ ಮತ್ತು ನಿಯಂತ್ರಣ ಮಸೂದೆ-2025 ಸದನದಲ್ಲಿ ಅಂಗೀಕಾರವಾದ ನಂತರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಡ್ರೀಮ್​​ 11 ಜತೆಗಿನ ಒಪ್ಪಂದದ ನಂತರ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್​ ಸೈಕಿಯಾ, ''ಮತ್ತೆ ಭವಿಷ್ಯದಲ್ಲಿ ಇಂತಹ ಕಂಪನಿಗಳ ಸಹಭಾಗಿತ್ವಕ್ಕೆ ಕೈಜೋಡಿಸುವುದಿಲ್ಲ. ಒಪ್ಪಂದ ಮುರಿದು ಕೊಂಡರುವ ಬಗ್ಗೆ ಧೃಢಪಡಿಸಿದ್ದಾರೆ.

ಬಿಸಿಸಿಐ ಜತೆ 358 ಕೋಟಿ ರೂ. ಒಪ್ಪಂದ!

ಡ್ರೀಮ್11 ಮತ್ತು ಮೈ11ಸರ್ಕಲ್ ಜಂಟಿಯಾಗಿ ಭಾರತೀಯ ಕ್ರಿಕೆಟ್ ತಂಡ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕತ್ವದ ಮೂಲಕ ಬಿಸಿಸಿಐಗೆ ಸುಮಾರು 1,000 ಕೋಟಿ ರೂ.ಗಳನ್ನು ನೀಡುತ್ತವೆ. ವಾಸ್ತವವಾಗಿ, ಡ್ರೀಮ್11 ತಂಡವು 2023-2026ರ ಅವಧಿಯಲ್ಲಿ ಟೀಮ್ ಇಂಡಿಯಾದ ಶೀರ್ಷಿಕೆ ಪ್ರಾಯೋಜಕರಾಗಿ 44 ಮಿಲಿಯನ್ ಯುಎಸ್ ಡಾಲರ್ (358 ಕೋಟಿ ರೂ.) ಒಪ್ಪಂದವನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net