ಮಾರುಕಟ್ಟೆಗೆ ಕಾಲಿಟ್ಟ 24 GB RAMನ ಸ್ಮಾರ್ಟ್​ಫೋನ್​...!​

one plus ace pro 2
ಸಾಂದರ್ಭಿಕ ಚಿತ್ರ
Published on

ದೆಹಲಿ: ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್​ಪ್ಲಸ್​ ತನ್ನ ನೂತನ ಪೋನ್​ನ್ನು ಮಾರುಕಟ್ಟೆಗೆ ತಂದಿದ್ದ, ಫೋನ್​ನ ಫೀಚರ್ಸ್ ನೋಡಿ ಟೆಕ್​ ಪ್ರಿಯರು ಹುಬ್ಬೆರುಸುತ್ತಿದ್ದಾರೆ. ಕಂಪನಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ ಒನ್​ಪ್ಲಸ್​ ಏಸ್​​ ಪ್ರೋನ ಉತ್ತರಾಧಿಕಾರಿಯಾಗಿ ಒನ್​ಪ್ಲಸ್​ ಏಸ್​-2 ಪ್ರೋವನ್ನು ಬಿಡುಗಡೆಗೊಳಿಸಿದೆ.

ಒನ್​ಪ್ಲಸ್ ಹೊಸ ಏಸ್​-2 ಪ್ರೋ ಸ್ಮಾರ್ಟ್‌ಫೋನ್​ನ್ನು ಚೀನಾದಲ್ಲಿ ಆಗಸ್ಟ್ 16ರಂದು ಬಿಡುಗಡೆ ಮಾಡಿದ್ದು, ಹಲವಾರು ನೂತನ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಭಾರತೀಯ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬುದನ್ನು ಇನ್ನು ಬಹಿರಂಗಪಡಿಸಿಲ್ಲವಾದರೂ, ಶೀಘ್ರದಲ್ಲೇ ಭಾರತೀಯರ ಕೈಗೆ ಸಿಗಲಿದೆ ಎನ್ನಲಾಗಿದೆ. ಒನ್​ಪ್ಲಸ್ ಹೊಸ ಏಸ್​-2 ಪ್ರೋ ಎರಡು ಮಾದರಿಗಳಲ್ಲಿ ಲಭ್ಯವಿದ್ದು, 24GB RAM + 1TB ಆನ್‌ಬೋರ್ಡ್ ಸ್ಟೋರೇಜ್‌ನ ಟಾಪ್-ಎಂಡ್ ಮಾಡೆಲ್ ಬೆಲೆ ಅಂದಾಜು ರೂ 45,900 ಇರಲಿದೆ. ಮತ್ತು 12GB RAM + 256GB ಸಂಗ್ರಹಣೆಯ ಮಾಡೆಲ್​ ಬೆಲೆಅಂದಾಜು ರೂ 34,400 ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಂಗಡಿಗೆ ಹೋಗಿ ಬರುತ್ತೇನೆಂದವ ವಾಪಸ್ಸು ಬರಲೇ ಇಲ್ಲ: ಪಾಲಕರು ಕಂಗಾಲು

ಒನ್​ಪ್ಲಸ್ ಹೊಸ ಏಸ್​-2 ಪ್ರೋ 6.74-ಇಂಚಿನ FHD+ 1.5K ಅಮೋಲ್​ಡ ಕರ್ವ್​ ಡಿಸ್‌ಪ್ಲೇ ಜೊತೆಗೆ ಕ್ವಾಲ್​ಕಾಮ್​​ ಸ್ನ್ಯಾಪ್​ಡ್ರ್ಯಾಗನ್​ 8 Gen 2 ಪ್ರೊಸೆಸರ್​ನಿಂದ ಚಾಲಿತವಾಗಿದೆ. ಇದು 50MP ಸೋನಿ IMX890 OIS ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕದೊಂದಿಗೆ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್​​ನ್ನು ಹೊಂದಿದೆ.ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.

ಜತೆಗೆ ಈ ಫೋನ್​ 5,000mAh ಬ್ಯಾಟರಿಯನ್ನು ಹೊಂದಿದ್ದು, 150W SUPERVOOC ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಫೋನ್ ಕೇವಲ 17 ನಿಮಿಷಗಳಲ್ಲಿ 100% ತಲುಪುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಆ್ಯಂಡ್ರಾಯ್ಡ್​​ 13 ಆಧಾರಿತ ಆಪರೇಟಿಂಗ್​ ಸಿಸ್ಟಮ್​ನ್ನು ಹೊಂದಿದ್ದು, ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿದೆ ಎನ್ನಲಾಗಿದೆ. ಜತೆಗೆ USB ಟೈಪ್-C ಪೋರ್ಟ್ ಹೊಂದಿರುವ ಈ ಫೋನ್​, ಹೊಸ 'ರೇನ್ ಟಚ್' ತಂತ್ರಜ್ಞಾನದೊಂದಿಗೆ ಬರಲಿದೆ. ಇದು ಮಳೆಯ ಸಮಯದಲ್ಲಿಯೂ ಫೋನ್ ಆಪರೇಟಿಂಗ್​ ಮಾಡಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್​ಸೈಟ್​ ಪರಿಶೀಲಿಸಬಹುದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net