More

    ಏಕದಿನ ವಿಶ್ವಕಪ್​ ವೇಳಾಪಟ್ಟಿ ಪ್ರಕಟಿಸಲು ಕೊನೆಗೂ ಮುಹೂರ್ತ ಫಿಕ್ಸ್​ ಮಾಡಿದ ಬಿಸಿಸಿಐ ಮತ್ತು ಐಸಿಸಿ

    ನವದೆಹಲಿ: ಹಿಂದೆಲ್ಲ ಏಕದಿನ ವಿಶ್ವಕಪ್​ ಟೂರ್ನಿಗಳ ವೇಳಾಪಟ್ಟಿ ವರ್ಷಕ್ಕೆ ಮೊದಲೇ ಪ್ರಕಟಗೊಳ್ಳುತ್ತಿತ್ತು. ಈ ಬಾರಿ ಈಗಾಗಲೆ ಸಾಕಷ್ಟು ತಡವಾಗುತ್ತ ಬಂದಿರುವ ವಿಶ್ವಕಪ್​ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಮತ್ತು ಐಸಿಸಿ ಕೊನೆಗೂ ಜಂಟಿಯಾಗಿ ಮುಹೂರ್ತ ನಿಗದಿಪಡಿಸಿದೆ. ಟೂರ್ನಿಗೆ ಭರ್ತಿ 100 ದಿನಗಳು ಬಾಕಿ ಇರುವಾಗ ಅಂದರೆ ಜೂನ್​ 27ರಂದು ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮತ್ತು ಐಸಿಸಿ ಶನಿವಾರ ಪ್ರಕಟಿಸಿದೆ.

    ಹಲವಾರು ಕಾರಣಗಳಿಂದಾಗಿ ಮುಂದೂಡಲ್ಪಡುತ್ತ ಬಂದ ಏಕದಿನ ವಿಶ್ವಕಪ್​ ವೇಳಾಪಟ್ಟಿಗೆ ಇತ್ತೀಚೆಗೆ ಪಾಕಿಸ್ತಾನದ ತಗಾದೆಯಿಂದಾಗಿ ತೊಂದರೆಯಾಗಿತ್ತು. ಇದೀಗ ಎಲ್ಲ ವಿಘ್ನಗಳು ನಿವಾರಣೆಯಾಗಿದ್ದು, ಜೂನ್​ 27ರಂದು ಮುಂಬೈನಲ್ಲಿ ನಡೆಯಲಿರುವ ವಿಶೇಷ ಸಮಾರಂಭವೊಂದರಲ್ಲಿ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ ವೇಳಾಪಟ್ಟಿಯನ್ನು ಬೆಳಗ್ಗೆ 11.30ಕ್ಕೆ ಬಿಡುಗಡೆ ಮಾಡಲು ಬಿಸಿಸಿಐ ಮತ್ತು ಐಸಿಸಿ ಸಿದ್ಧತೆ ನಡೆಸಿದೆ.

    ಸಂಭಾವ್ಯ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್​ 5ರಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡಗಳ ನಡುವಿನ ಮುಖಾಮುಖಿಯೊಂದಿಗೆ ಅಹಮದಾಬಾದ್​ನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ನವೆಂಬರ್​ 19ರಂದು ಫೈನಲ್​ ಪಂದ್ಯ ಕೂಡ ಇಲ್ಲೇ ನಡೆಯಲಿದೆ. ಭಾರತ ತಂಡ ಅಕ್ಟೋಬರ್​ 8ರಂದು ಚೆನ್ನೈನಲ್ಲಿ ಆಸ್ಟ್ರೆಲಿಯಾ ವಿರುದ್ಧ ಅಭಿಯಾನ ಆರಂಭಿಸಲಿದ್ದರೆ, ಅಕ್ಟೋಬರ್​ 15ರಂದು ಪಾಕಿಸ್ತಾನ ವಿರುದ್ಧ ಅಹಮದಾಬಾದ್​ನಲ್ಲಿ ಹೈ-ವೋಲ್ಟೇಜ್​ ಪಂದ್ಯವನ್ನು ಆಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts