More

    ತರಕಾರಿ ಅಂಗಡಿಯಾಕೆಗೆ ನಾನ್​ವೆಜ್​ ಮೆಸೇಜ್​ ಕಳಿಸಿದ್ದಾತನ ಬಂಧನ..

    ಬೆಂಗಳೂರು: ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್​ವೆಜ್ ಮೆಸೇಜ್ ಕಳಿಸಿದ್ದರ ಪರಿಣಾಮವಾಗಿ ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಮಾರುತಿ ಎಂಬಾತ ಬಂಧಿತ ಆರೋಪಿ.

    ಈತ ಮಂಜುನಾಥನಗರದಲ್ಲಿರುವ ಮಹಿಳೆಯೊಬ್ಬರ ದಿನಸಿ ಹಾಗೂ ತರಕಾರಿ ಅಂಗಡಿಗೆ ಆಗಾಗ ಖರೀದಿಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಮೊಬೈಲ್​ಫೋನ್​ ನಂಬರ್ ಪಡೆದುಕೊಂಡಿದ್ದ.

    ಮಾತ್ರವಲ್ಲ, ಬಳಿಕ ಸಲುಗೆ ಬೆಳೆಸಿಕೊಂಡಿದ್ದ ಈತ ಆಕೆಗೆ ಅಶ್ಲೀಲ ಚಿತ್ರ ಹಾಗೂ ಆಕ್ಷೇಪಾರ್ಹ ಮೆಸೇಜ್​ಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದ. ಈ ಸಂಬಂಧವಾಗಿ ಮಹಿಳೆ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದು, ಅವರು ಆರೋಪಿ ಮಾರುತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts