More

    ಮತ್ತೊಮ್ಮೆ ಸುವರ್ಣ ಸಂಭ್ರಮ

    ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಜೋಡಿಗಳಿಗಾಗಿ ‘ಸುವರ್ಣ ಪ್ರೇಮೋತ್ಸವ’ ಆಚರಿಸಿದ್ದ ಸ್ಟಾರ್ ಸುವರ್ಣ ವಾಹಿನಿ, ಈಗ ಸಿಂಗಲ್ ಆಗಿರುವವರಿಗಾಗಿ ‘ಸುವರ್ಣ ಸಂಭ್ರಮ’ ಎಂಬ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಈ ಕಾರ್ಯಕ್ರಮವು ಭಾನುವಾರ (ಫೆ.28) ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ.

    ನಟಿಯರಾದ ಕೃಷಿ ತಾಪಂಡ, ಕಾರುಣ್ಯಾ ರಾಮ್ ಶ್ರುತಿ ಪ್ರಕಾಶ್, ಕವಿತಾ ಗೌಡ ಈ ಕಲರ್​ಫುಲ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ನವೀನ್ ಸಜ್ಜು ತಮ್ಮ ವಿಭಿನ್ನ ಶೈಲಿಯ ಹಾಡುಗಳ ಮೂಲಕ ಹಾಡಿ ರಂಜಿಸಿದ್ದಾರೆ. ಮಿಮಿಕ್ರಿ ದಯಾನಂದ್ ಅವರ ಕಾಮಿಡಿ ಕಚಗುಳಿ ಜತೆಗೆ ಶಾಲಿನಿ ಮತ್ತು ನಿರಂಜನ್ ದೇಶಪಾಂಡೆ, ಸುವರ್ಣ ಸಂಭ್ರಮದಲ್ಲಿ ನಕ್ಕುನಲಿದಿದ್ದಾರೆ. ಈ ವಿಶೇಷ ಕಾರ್ಯಕ್ರಮ ಸ್ಟಾರ್ ಸುವರ್ಣದಲ್ಲಿ ಭಾನುವಾರದಂದು ಮೂಡಿಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts