More

    ವಿಜಯಪುರದಲ್ಲಿ ಮತ್ತೆ ಭೂಕಂಪ; ಭೂಮಿಯಿಂದ ಜೋರಾದ ಶಬ್ದ, ಕಂಪನದ ಅನುಭವ..

    ವಿಜಯಪುರ: ದೇಶಾದ್ಯಂತ ಜನರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾತ್ತಿರುವುದರಿಂದ ಆತಂಕ ಮೂಡುತ್ತಿರುವ ನಡುವೆಯೇ ಅಲ್ಲಲ್ಲಿ ಭೂಕಂಪ ಕೂಡ ಹೆಚ್ಚಾಗುತ್ತಿದ್ದು, ಇಂದು ರಾಜ್ಯದ ವಿಜಯಪುರದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ.

    ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು 7.57ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿಯಿಂದ ಜೋರಾದ ಶಬ್ದದ ಜೊತೆಗೆ ಕಂಪನವೂ ಉಂಟಾಗಿದೆ ಎಂದು ಜನರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಈ ಮೂಲಕ ಪದೇಪದೆ ಭೂಕಂಪ ಸಂಭವಿಸುತ್ತಿರುವ ವಿಜಯಪುರದಲ್ಲಿ ಮತ್ತೊಮ್ಮೆ ಕಂಪನ ಉಂಟಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.

    ತಾಲ್ಲೂಕಿನ ಹುಬನೂರ, ಟಕ್ಕಳಕಿ, ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಜಾಲಗೇರಿ, ಇಟ್ಟಂಗಿಹಾಳ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜತೆಗೆ ಭೂಮಿಯಿಂದ ಭಾರಿ ಶಬ್ದವೂ ಹೊರಹೊಮ್ಮಿದ್ದರಿಂದ ಬೆಚ್ಚಿದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ ಎಂದು ಜಿಲ್ಲಾಡಳಿತ ಭೂಕಂಪ ಆಗಿರುವುದನ್ನು ಸ್ಪಷ್ಟಪಡಿಸಿದೆ.

    ವಿಜಯಪುರ ಜಿಲ್ಲೆಯಾದ್ಯಂತ ಮತ್ತೆ ಕಂಪಿಸಿದ ಭೂಮಿ: ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಸವಿನಿದ್ದೆಯಲ್ಲಿದ್ದ ಜನರು

    ಭೂಕಂಪನಕ್ಕೆ ಮಳೆಯೇ ಕಾರಣವಾಯಿತಾ? ತಜ್ಞರ ತಂಡ ಪರಿಶೀಲಿಸಿದ್ದೇನು? ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ಅಧಿಕಾರಿಗಳು ಬಿಚ್ಚಿಟ್ಟ ಮಾಹಿತಿ ಇಲ್ಲಿದೆ…!

    ವಿಜಯಪುರದಲ್ಲಿ ಮತ್ತೆ ಭೂಕಂಪ; ಜನರಲ್ಲಿ ಮರುಕಳಿಸಿದ ಆತಂಕ..

    ಮತ್ತೆ ಮತ್ತೆ ಭೂಕಂಪ: ವಿಜಯಪುರ ಜನತೆಯಲ್ಲಿ ಕಡಿಮೆಯಾಗದ ಆತಂಕ..

    ವಿಜಯಪುರ ಜಿಲ್ಲೆಯಲ್ಲಿ ಪುನಃ ಭೂಕಂಪ; ಜನರಲ್ಲಿ ಏರಿತು ಚಿಂತೆ, ಆತಂಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts