More

    ವಿಜಯಪುರ ಜಿಲ್ಲೆಯಲ್ಲಿ ಪುನಃ ಭೂಕಂಪ; ಜನರಲ್ಲಿ ಏರಿತು ಚಿಂತೆ, ಆತಂಕ..

    ವಿಜಯಪುರ: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪ ಇಲ್ಲಿನ ಜನರಲ್ಲಿ ಚಿಂತೆ ಹಾಗೂ ಆತಂಕವನ್ನು ಉಂಟು ಮಾಡಿದ್ದು, ಇಂದು ಮತ್ತೆ ಭೂಕಂಪ ಉಂಟಾದ್ದರಿಂದ ಈ ದುಗುಡ ಮತ್ತಷ್ಟು ಹೆಚ್ಚಾಗಿದೆ. ಕಳೆದ ವರ್ಷ ಸುಮಾರು ಇದೇ ಸಮಯದಲ್ಲಿ ಮತ್ತು ಕಳೆದ ಕೆಲವು ದಿನಗಳಿಂದ ಇಲ್ಲಿ ಮತ್ತೆ ಮತ್ತೆ ಭೂಕಂಪ ಉಂಟಾಗುತ್ತಲೇ ಇದೆ.

    ಇಂದು ಮಧ್ಯಾಹ್ನ 2.17ಕ್ಕೆ ಭೂಕಂಪನ ಉಂಟಾಗಿದ್ದು, ಕಂಪನದ ಕೇಂದ್ರ ಬಿಂದು ಭೂತನಾಳ ತಾಂಡದಲ್ಲಿ ಕಂಡು ಬಂದಿದೆ. ರಿಕ್ಟರ್ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲಾಗಿದೆ. ಅರಕೇರಿ, ಬರಟಗಿ ಗ್ರಾಮಗಳು ಸೇರಿದಂತೆ ನಗರದ ಹಲವು ಬಡಾವಣೆಯಲ್ಲಿ ಭೂ ಕಂಪನದ ಅನುಭವವಾಗಿದೆ.

    ಆ. 22ರ ಸಂಜೆ 4.26ರ ಸುಮಾರಿಗೆ ಇದೇ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿತ್ತು. ಭೂಮಿಯ 10 ಕಿಲೋಮೀಟರ್​ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡಳಿತ ವರದಿ ನೀಡಿತ್ತು. ಆ.20ರಂದು ಸಂಜೆ 8.16ರ ಸುಮಾರಿಗೆ 3.5ರಷ್ಟು ತೀವ್ರತೆಯ ಭೂಕಂಪ ಉಂಟಾಗಿತ್ತು. ಆ.21ರಂದು ಸಹ ಭೂಮಿ ಕಂಪಿಸಿದ್ದು 3.1ರಷ್ಟು ತೀವ್ರತೆ ದಾಖಲಾಗಿತ್ತು. ಅಲ್ಲದೆ ಜುಲೈನಲ್ಲಿ ಕೂಡ ಕಂಪನ ಉಂಟಾಗಿತ್ತು.

    ಮತ್ತೆ ಮತ್ತೆ ಭೂಕಂಪ: ವಿಜಯಪುರ ಜನತೆಯಲ್ಲಿ ಕಡಿಮೆಯಾಗದ ಆತಂಕ..

    ಕಾರು ಅಪಘಾತಕ್ಕೆ ದಂಪತಿ ಬಲಿ; ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಗನೂ ಇಂದು ಶವವಾಗಿ ಪತ್ತೆ!

    ಕೆಲವೇ ಸೆಕೆಂಡುಗಳಲ್ಲಿ 500 ಕೋಟಿ ರೂ. ನಷ್ಟ; ಟ್ವಿನ್​ ಟವರ್ ಸಂಪೂರ್ಣ ನೆಲಸಮ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts