More

    ಅಮೆರಿಕದ ಪೂರ್ವ ಕರಾವಳಿಯಲ್ಲಿ ಭೂಕಂಪ

    ಬೆಂಕಿ ಬಸಣ್ಣ, ನ್ಯೂ ಯಾರ್ಕ್
    ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ನ್ಯೂಯಾರ್ಕ್, ನ್ಯೂ ಜೆರ್ಸಿ, ಕನೆಕ್ಟಿಕಟ್, ಪೆನ್ಸಿಲ್ವೇನಿಯಾ ಮುಂತಾದ ರಾಜ್ಯಗಳಲ್ಲಿ ಭೂಕಂಪದ ಅನುಭವವಾಗಿದೆ. ಇದರ ಕೇಂದ್ರ ಬಿಂದು ನ್ಯೂಜೆರ್ಸಿ ರಾಜ್ಯದ ಹಂಟರ್ಟನ್ ಆಗಿದ್ದು ರಿಕ್ಟರ್ ಸ್ಕೇಲ್​ನಲ್ಲಿ 4.8 ತೀವ್ರತೆ ದಾಖಲಾಗಿದೆ.

    ಈ ಭೂಕಂಪದಿಂದ ಮನೆಗಳು ಅಲುಗಾಡಿದ್ದು ಜನರು ಭಯ ಭೀತರಾಗಿ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಜೀವಹಾನಿಯಾದ ಬಗ್ಗೆ ವರದಿ ಬಂದಿಲ್ಲ. ನ್ಯೂಯಾರ್ಕ್ ಸಿಟಿಯಲ್ಲಿ 140 ವರ್ಷಗಳ ಹಿಂದೆ 1884 ರಲ್ಲಿ 5.0 ರಿಕ್ಟರ್ ಸ್ಕೇಲಿನ ಭೂಕಂಪನವಾಗಿತ್ತು. ಅದನ್ನು ಹೊರತುಪಡಿಸಿದರೆ 2024ರಲ್ಲಿ 4.8 ತೀವ್ರತೆಯ ಭೂಕಂಪವಾಗಿದೆ. ಇಲ್ಲಿನ ಅಂತರಾಷ್ಟ್ರೀಯ JFK ಮತ್ತು ನೆವಾರ್ಕ್ ಏರ್ಪೋರ್ಟ್​​ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

    ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾತಿ ಹೋಕಲ್ ಮತ್ತು ನ್ಯೂ ಜರ್ಸಿ ರಾಜ್ಯದ ಗವರ್ನರ್ ಫಿಲ್ ಮರ್ಪಿ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ತಯಾರಿದ್ದೇವೆ ಎಂದು ಘೋಷಿಸಿದ್ದಾರೆ. ಭೂಕಂಪನದ ಆಫ್ಟರ್ ಶಾಕ್ ಅಲೆಗಳು ಆಗುವ ಸಂಭವವಿದ್ದು ಜನತೆ ಎಚ್ಚರವಾಗಿರಬೇಕೆಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts