More

    ವ್ಯಕ್ತಿತ್ವ ರೂಪುಗೊಳ್ಳಲು ಕೌಶಲ ತರಬೇತಿ ಅಗತ್ಯ


    ಮಂಡ್ಯ: ವ್ಯಕ್ತಿತ್ವ ರೂಪುಗೊಳ್ಳಲು ಕೌಶಲ ತರಬೇತಿ ನೆರವಾಗುತ್ತದೆ ಎಂದು ಯುಚ ಸ್ಪಂದನ ಮಂಡ್ಯದ ಯುವ ಪರಿವರ್ತಕ ಕೆ.ಪಿ. ಸುನಿಲ್ ಅಭಿಪ್ರಾಯಪಟ್ಟರು.


    ಮದ್ದೂರು ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ದೈಹಿಕ ಶಿಕ್ಷಣ ವಿಭಾಗದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಜೀವನ ಕೌಶಲ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


    ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯ. ಅಂತಹ ವ್ಯಕ್ತಿತ್ವವನ್ನು ಸಂವಹನ, ಕಲೆ, ಸಂಯೋಜನ, ಕಲೆ ಹಾಗೂ ಕಲಿಯುವ ಇಚ್ಛೆಯನ್ನು ಆಧರಿಸಿ ರೂಪಿಸಲಾಗುತ್ತದೆ. ಹೊಸ ಜೀವನ ಕಲೆಯನ್ನು ಕಲಿಯುವ ಜತೆಗೆ ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅರಿತುಕೊಳ್ಳಬಹುದು. ಅದಕ್ಕಾಗಿ ಜೀವನ ಕೌಶಲ ತರಬೇತಿ ಇಂದಿನ ಯುವ ಪೀಳಿಗೆಗೆ ಅವಶ್ಯಕವಾಗಿದೆ ಎಂದರು.


    ಇತ್ತೀಚಿಗೆ ಹೆಚ್ಚಿನ ಜನರು ಶಿಕ್ಷಣ ಜತೆಗೆ ಜೀವನ ಕೌಶಲ ತರಬೇತಿಯನ್ನು ನೀಡಲು ಬಯಸುತ್ತಾರೆ. ಆದರೆ, ಜೀವನ ಕೌಶಲ ಕಲಿಕೆಯು ಜೀವಮಾನದ ಪ್ರಕ್ರಿಯೆ ಆಗಬೇಕು. ಆಗ ಪ್ರಪಂಚವನ್ನು ಹೊಸ ದೃಷ್ಟಿಕೋನದಿಂದ ನೋಡುವಂತಾಗುತ್ತದೆ. ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂದು ವಿಶ್ಲೇಷಿಸಿದರು.

    ಯವ ಪರಿವರ್ತಕಿ ಸೌಂದರ್ಯ, ವಿದ್ಯಾರ್ಥಿಗಳಿಗೆ ಚಟುವಟಿಗಳ ಮೂಲಕ ಜೀವನ ಕೌಶಲದ ಬಗ್ಗೆ ವಿಶೇಷ ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಆರ್.ಎನ್.ಸಂತೋಷ, ಐ ಕ್ಯೂ ಎ.ಸಿ. ಸಂಚಾಲಕ ಡಾ. ಉಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts