More

    ಆರ್ಟ್​​ ಆಫ್​ ಲಿವಿಂಗ್​ ಕಾರ್ಯಕ್ರಮದಲ್ಲಿ ಮನಕಲಕುವ ಕಥೆಗಳು; ಈ ಮಕ್ಕಳ ವೇದನೆ ಕೇಳಿದವರ ಕಣ್ಣಲ್ಲಿ ನೀರು

    ಬೆಂಗಳೂರು: ಈ ಮಕ್ಕಳು ಬಹುಶಃ ಮೊಟ್ಟಮೊದಲ ಬಾರಿಗೆ ಟ್ರೇನಿನಲ್ಲಿ ಪ್ರಯಾಣ ಮಾಡಿರಬಹುದು. ಆದರೆ ಈ ಮಕ್ಕಳಿಗೆ ಅತೀ ಚಿರಪರಿಚಿತವಾದವಿಷಯವೆಂದರೆ, ಹಿಂಸೆ ಮತ್ತು ಭಯೋತ್ಪಾದನೆ. ಹಿಂಸೆಯಿಂದ ಪೀಡಿತರಾದ, ಭಯೋತ್ಪಾದನೆಯಿಂದ ಶೋಷಿಸಲ್ಪಟ್ಟ ಕುಟುಂಬಗಳಿಗೆ ಸೇರಿದ ಈ 37 ಮಕ್ಕಳಲ್ಲಿ ಕೆಲವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ.

    ಇವರು ಆರ್ಟ್ ಆಫ್ ಲಿವಿಂಗ್, ಕೌಟುಂಬಿಕ ವ್ಯವಹಾರಗಳ ಮಂತ್ರಾಲಯ, ಕೋಮು ಸಾಮರಸ್ಯದ ರಾಷ್ಟ್ರೀಯ ಸಂಸ್ಥೆಯ ಜಂಟಿ ಯತ್ನದಿಂದ, ” ನೋ ಮೈ ಇಂಡಿಯಾ” ದ ಭಾಗವಾಗಿ, ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಫಾತ ನಿವಾರಣಾ ಕಾರ್ಯಕ್ರಮವನ್ನು ಮಾಡಿದರು. “ನೋ ಮೈ ಇಂಡಿಯಾ” ಕಾರ್ಯಕ್ರಮವು ಗುಣಮುಖಗೊಳಿಸುವ ಹಾಗೂ ಆಘಾತನಿವಾರಣೆಯ ಕಾರ್ಯದಲ್ಲಿ ತೊಡಗುವುದರೊಡನೆ, ಅವರ ಭಾವನೆಗಳನ್ನು ನಿಭಾಯಿಸಡಲ್ಲಂತಹ , ಗತದ ಜೀವನದ ಕೋಲಾಹಲಕರವಾದ ನೆನಪುಗಳನ್ನು ನಿಭಾಯಿಸಲು ಅವರಿಗೆ ಕೆಲವು ತಂತ್ರಗಳನ್ನು ನೀಡಿ, ಅವರು ಆಳವಾದ ವಿಶ್ರಾಂತಿ ಮತ್ತು ಶಾಂತಿ ಪಡೆಯುವಂತೆ ಮಾಡುವುದರೊಡನೆ, ರಾಷ್ಟ್ರೀಯ ಏಕ್ಯತೆಯ ಭಾವ, ಭ್ರಾತೃತ್ವ ಹಾಗೂ ಕೋಮು ಸೌಹಾರ್ದವನ್ನೂ ಅವರಲ್ಲಿ ತುಂಬುತ್ತದೆ. ಇದರಿಂದ ಈ ಮಕ್ಕಳು ತಮ್ಮ ಆಘಾತಕರವಾದ ಎತದಿಂದ ಹೊರಬಂದು , ದೇಶದ ಸಾಮಾನ್ಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ತಿಳಿಯುತ್ತಾರೆ.

    ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ, ಜಾಗತಿಕ ಮಾನವತಾವಾದಿಯಾದ ಗುರುದೇವ್ ಶ್ರೀ ಶ್ರೀ ರವಿಶಂಕರರ ದೃಷ್ಟಿಕೋನವಾದ ಹಿಂಸಾಮುಕ್ತ, ಒತ್ತಡ-ರಹಿತವಾದ ನವಜೀವನವನ್ನು ಈ ಮಕ್ಕಳು ಆರಂಭಿಸುವಂತೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಮುಖ್ಯ ಪ್ರಕ್ರಿಯೆಯೆಂದರೆ “ಸುದರ್ಶನ ಕ್ರಿಯೆ”. ಈ ಪ್ರಕ್ರಿಯೆಯು ಶಕ್ತಿಶಾಲಿಯಾದ, ಲಯಬದ್ಧವಾದ ಉಸಿರಾಟದ ಪ್ರಕ್ರಿಯೆಯಾಗಿದ್ದು, ಇದರ ನಿತ್ಯಾಭ್ಯಾಸದಿಂದ ಒತ್ತಡದ ಹಾರ್ಮೋನುಗಳು ಮಹತ್ವವಾಗಿ ಕುಗ್ಗುವುದರೊಡನೆ, ಮನಸ್ಸಿನ ಸ್ಪಷ್ಟತೆ ಹೆಚ್ಚುತ್ತದೆ ಮತ್ತು ಒಬ್ಬರ ಸಂತೋಷದ ಮಟ್ಟವೂ ಹೆಚ್ಚುತ್ತದೆ. ಭಾರತ ಸರ್ಕಾರದ ಕೌಟುಂಬಿಕ ವ್ಯವಹಾರಗಳ ಮಂತ್ರಾಲಯದ, ಎನ್ಎಫ್ ಸಿಎಚ್ ನ ಜಂಟಿ ಕಾರ್ಯದರ್ಶಿಯಾದ ಶ್ರೀ ಪಿ.ವಿ. ನಾಯರ್ ರವರು, ” ಅನೆಕಾನೇಕ ಕಾರ್ಯಕ್ರಮಗಳಲ್ಲಿ ಆರ್ಟ್ ಆಫ್ ಲಿವಿಂಗ್ ನಿಯೋಜಿಸಿರುವ ಕಾರ್ಯಕ್ರಮವು ಮಕ್ಕಳ ಮೇಲೆ ಗರಿಷ್ಠ ಮಟ್ಟದ ಪರಿಣಾಮ ಬೀರುತ್ತದೆ ಎಂದು ಹೇಳಬಲ್ಲೆ. ಐದು ದಿವಸಗಳ ಹಿಂದೆ ನಾವು ಕರೆದುಕೊಂಡು ಬಂದಿದ್ದು ಇದೇ ಮಕ್ಕಳೇ ಎಂದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಮಕ್ಕಳು ಹಿಂಸೆಯ ಸಂತ್ರಸ್ತರು ಮತ್ತು ಇವರ ಜೀವನದ ಅಮೂಲ್ಯವಾದ ವಿಷಯಗಳನ್ನು ಹಿಂಸೆಯು ಕಸಿದುಕೊಂಡುಬಿಟ್ಟಿದೆ. ಇದರಿಂದ ಆವರು ತಮ್ಮ ಆಘಾತಕರವಾದ ಅನುಭವಗಳನ್ನು ನಿಭಾಯಿಸಲಾರದೆ, ತಮ್ಮ ಚಿಪ್ಪಿನಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ಅದರಿಂದ ಈ ಮಕ್ಕಳನ್ನು ಹೊರತರಬೇಕೆಂದು ನಾವು ಬಯಸಿದೆವು” ಎಂದು ಹಂಚಿಕೊಂಡರು.

    ಆರ್ಟ್ ಆಫ್ ಲಿವಿಂಗ್ ನೊಡನೆ ನಡೆಯುತ್ತಿರುವ ಮೂರನೆಯ “ನೋ ಮೈ ಇಂಡಿಯ” ಕಾರ್ಯಕ್ರಮವಿದು. ಕಾರ್ಯಕ್ರಮದ ಕೊನೃಯ ದಿನದಂದು ಉಪಸ್ಥಿತರಾಗಿದ್ದ ಗಣ್ಯರೆಂದರೆ, ಆರ್ಟ್ ಆಫ್ ಲಿವಿಂಗ್ ಟ್ರಸ್ಟ್ ನ ಅಧ್ಯಕ್ಷರಾದ ಮಧು ರಾವ್, ಎನ್ ಎಫ್ ಸಿ ಹೆಚ್, ಭಾರತ ಸರ್ಕಾರದ ಕೌಟುಂಬಿಕ ವ್ಯವಹಾರಗಳ ಮಂತ್ರಾಲಯದ ಜಂಟಿ ಕಾರ್ಯದರ್ಶಿ , ಶ್ರೀ ಪಿ.ವಿ. ನಾಯರ್, ಭಾರತ ಸರ್ಕಾರದ ಕೌಟುಂಬಿಕ ವ್ಯವಹಾರಗಳ ಉಪಕಾರ್ಯದರ್ಶಿ ಶ್ರೀ ಸೌರಭ್ ದುಬೆ ಹಾಗೂ ಭಾರತ ಸರ್ಕಾರದ ಕೌಟುಂಬಿಕ ವ್ಯವಹಾರಗಳ ಡಿಡಿಒ ರವಿಶಂಕರ್ ತ್ರಿಪಾಠಿ. ಆರ್ಟ್ ಆಫ್ ಲಿವಿಂಗ್ ನ ಅಧ್ಯಕ್ಷರಾದ ಮಧುರಾವ್ ಅವರು, ” ಬಹುತೇಕ ಮಕ್ಕಳಿಗೆ ಪೋಷಕರಿಲ್ಲ. ನಾವು ಯಾರೂ ಊಹಿಸಲಾರದಂತಹ ಹಿಂಸೆಯನ್ನು ಈ ಮಕ್ಕಳು ಕಂಡಿದ್ದಾರೆ. ಹಿಂಸೆ, ಉದ್ರಿಕ್ತತೆಯನ್ನೇ ಕಂಡಿರುವ ಈ ಮಕ್ಕಳಲ್ಲಿ ಇಂದು ಸ್ವಯಂಸ್ಫುರಿತವಾಗಿ ಉಕ್ಕಿಬಂದ ಸಂತೋಷವನ್ನು ಕಂಡು ನಮ್ಮೆಲ್ಲರ ಹೃದಯಗಳೂ ತುಂಬಿಬಂದವು” ಎಂದರು. . ಕಾಶ್ಮೀರದ ಶ್ರೀನಗರದಿಂದ ಬಂದಿದ್ದ ಓರ್ವ ಶಿಬಿರಾರ್ಥಿಯಾದ ಜೆಹ್ರಾನ್ ಅಹ್ಮದ್ ರವರು, ಈ ಕಾರ್ಯಕ್ರಮ ಮಾಡಿದ ನಂತರ ಧ್ಯಾನದ ಬಗ್ಗೆ ಕಲಿತಿರುವರೆಂದೂ ಮತ್ತು ಅವರ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ದಾರಿ ಇದು ಎಂದು ಕಂಡುಕೊಂಡರೆಂದು ಹೇಳಿದರು. ” ವಿಪರೀತವಾಗಿ ಆಲೋಚಿಸುವುದು ಈಗ ಬಹಳ ಕಡಿಮೆಯಾಗಿದೆ. ಒತ್ತಡ ಮತ್ತು ಆತಂಕದ ಮಟ್ಟವೂ ಈಗ ಕಡಿಮೆಯಾಗಿದೆ. ನನ್ನಲ್ಲಿ ಈಗ ಹೆಚ್ಚು ವಿಶ್ವಾಸ ತುಂಬಿದೆ” ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts