More

    ಅಜ್ಜ ಖರೀದಿಸಿದ ಷೇರುಗಳ ದಾಖಲೆ ಮೊಮ್ಮಗನಿಗೆ ಈಗ ಸಿಕ್ಕಿತು; 750 ಪಟ್ಟು ಲಾಭ ದೊರೆಯಿತು!

    ಮುಂಬೈ: ಹಠಾತ್ತನೇ ನೀವು ಲಕ್ಷಾಂತರ ರೂಪಾಯಿ ಮೌಲ್ಯದ 30 ವರ್ಷಗಳ ಹಳೆಯ ದಾಖಲೆಯನ್ನು ಕಂಡುಕೊಂಡರೆ, ಅದು ನಿಮಗೆ ಲಾಭ ತಂದುಕೊಟ್ಟರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ. ಚಂಡೀಗಢದ ಮಕ್ಕಳ ತಜ್ಞ ಡಾ. ತನ್ಮಯ್ ಮೋತಿವಾಲಾ ಅವರ ಜೀವನದಲ್ಲಿ ಇಂಥದ್ದೇ ಅಚ್ಚರಿ ಘಟನೆ ನಡೆದಿದೆ. ಈ ಅಚ್ಚರಿಯ ಬೆಳವಣಿಗೆ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆ ಹಂಚಿಕೊಂಡಿದ್ದಾರೆ.

    ಡಾ. ತನ್ಮಯ್ ಮೋತಿವಾಲಾ ಅವರು ತಮ್ಮ ಕುಟುಂಬದ ಆರ್ಥಿಕತೆಗೆ ಸಂಬಂಧಿಸಿದ ದಾಖಲೆಗಳನ್ನು ಜೋಡಿಸುತ್ತಿದ್ದರು, ಆಗ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಎಸ್‌ಬಿಐನ ಷೇರು ಪ್ರಮಾಣಪತ್ರ ದೊರೆತಿದೆ. ಈ ಪ್ರಮಾಣಪತ್ರವನ್ನು ನೋಡಿದ ನಂತರ, ತನ್ಮಯ್ ಮೋತಿವಾಲಾ ಅವರ ಅಜ್ಜ 1994 ರಲ್ಲಿ 500 ರೂಪಾಯಿ ಮೌಲ್ಯದ ಎಸ್‌ಬಿಐ ಷೇರುಗಳನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಷೇರುಗಳನ್ನು ಅವರ ಅಜ್ಜ ಮಾರಾಟ ಮಾಡಿರಲಿಲ್ಲ.

    ಈ 30 ವರ್ಷಗಳ ಅವಧಿಯಲ್ಲಿ, ಎಸ್‌ಬಿಐ ಷೇರುಗಳು ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಈಗ ತನ್ಮಯ್ ಮೋತಿವಾಲಾ ಅವರು ಹೊಂದಿರುವ ಷೇರುಗಳ ಬೆಲೆ 3.75 ಲಕ್ಷ ರೂ.ಗೆ ಏರಿಕೆಯಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಈ ಸಂತೋಷವನ್ನು ವ್ಯಕ್ತಪಡಿಸುತ್ತಾ, ಡಾ. ಮೋತಿವಾಲಾ ಅವರು, “ಹೂಡಿಕೆಯು ದೊಡ್ಡ ಮೊತ್ತವಲ್ಲ. ಆದರೆ, 30 ವರ್ಷಗಳಲ್ಲಿ 750 ಪಟ್ಟು ಲಾಭವನ್ನು ನೀಡಿದೆ” ಎಂದು ಬರೆದಿದ್ದಾರೆ.

    ಇದರೊಂದಿಗೆ ಡಾ.ಮೋತಿವಾಲಾ ಅವರು ತಮ್ಮ ಕುಟುಂಬದ ಸ್ಟಾಕ್ ಪ್ರಮಾಣಪತ್ರಗಳನ್ನು ಡಿಮ್ಯಾಟ್ ರೂಪದಲ್ಲಿ ಪರಿವರ್ತಿಸುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.. ಇದರಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

    ತೊಡಕಿನ ಪ್ರಕ್ರಿಯೆಯನ್ನು ಎದುರಿಸಲು ಸಲಹೆಗಾರರ ​​ಸಹಾಯದ ಅಗತ್ಯವಿದೆ ಎಂದು ಹೇಳಿದ್ದಾರೆ. ಆದರೂ, ಸುದೀರ್ಘ ಪ್ರಕ್ರಿಯೆಯ ನಂತರ, ಈ ಷೇರುಗಳನ್ನು ಈಗ ಡಿಮ್ಯಾಟ್ ಸ್ವರೂಪಕ್ಕೆ ಪರಿವರ್ತಿಸಲಾಗಿದೆ. ಡಾ. ಮೋತಿವಾಲಾ ಅವರು ತಮ್ಮ ಅಜ್ಜನ ಈ ಷೇರುಗಳನ್ನು ಮಾರಾಟ ಮಾಡದೆ ಹಾಗೆಯೇ ಇಟ್ಟುಕೊಳ್ಳುವುದಾಗಿಯೂ ಅವರು ಹೇಳಿದ್ಧಾರೆ.

    ಸದ್ಯ ಎಸ್‌ಬಿಐ ಷೇರುಗಳ ಬೆಲೆ ರೂ 767.35 ರಷ್ಟಿದೆ. ಹಿಂದಿನ ವಹಿವಾಟಿನ ದಿನಕ್ಕೆ ಹೋಲಿಸಿದರೆ ಷೇರಿನ ಬೆಲೆಯಲ್ಲಿ 1.21% ಹೆಚ್ಚಳವಾಗಿದೆ. ಮಾರ್ಚ್ 7 ರಂದು ಈ ಷೇರು 793.50 ರೂ. ಇತ್ತು. ಇದು ಶೇರುಪೇಟೆಯ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಏಪ್ರಿಲ್ 2023 ರ ಹೊತ್ತಿಗೆ, ಈ ಷೇರಿನ ಬೆಲೆ 519 ರೂ.ಗೆ ಕುಸಿದಿತ್ತು. ಇದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆಯಾಗಿದೆ.

    ಅದಾನಿ ಪವರ್ ಷೇರು ಬೆಲೆ 3 ಸೆಷನ್‌ಗಳಲ್ಲಿ 14% ಏರಿಕೆಯಾಗಿದ್ದೇಕೆ?: ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ತಜ್ಞರು

    ರೂ. 46ರಿಂದ 35 ಪೈಸೆಗೆ ಕುಸಿದಿದ್ದ ಷೇರು: ಒಂದು ವರ್ಷದಲ್ಲಿ 671% ಹೆಚ್ಚಳವಾಗಿ ಹೂಡಿಕೆದಾರಿಗೆ ಲಾಭದ ಸುರಿಮಳೆ

    ರೂ. 2,641ರಿಂದ 290ಕ್ಕೆ ಕುಸಿದ ರಿಲಯನ್ಸ್​ ಷೇರು: ಈಗ ಅನಿಲ್​ ಅಂಬಾನಿ ಕಂಪನಿಯ ಸ್ಟಾಕ್​ ಬೆಲೆ ಏರುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts