More

    ಅದಾನಿ ಪವರ್ ಷೇರು ಬೆಲೆ 3 ಸೆಷನ್‌ಗಳಲ್ಲಿ 14% ಏರಿಕೆಯಾಗಿದ್ದೇಕೆ?: ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ತಜ್ಞರು

    ಮುಂಬೈ: ಮಂಗಳವಾರದಂದು ಅದಾನಿ ಪವರ್ ಲಿಮಿಟೆಡ್‌ನ (Adani Power Ltd.) ಷೇರುಗಳು ಸತತ ಮೂರನೇ ಸೆಷನ್‌ಗೆ ತಮ್ಮ ಮೇಲ್ಮುಖ ಓಟವನ್ನು ಮುಂದುವರಿಸಿತು. ಈ ಸ್ಟಾಕ್ ಶೇಕಡಾ 5ರಷ್ಟು ಜಿಗಿದು ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಯಿತು. ಈ ಮೂಲಕ ರೂ 588.45 ಮುಟ್ಟಿ, 52 ವಾರಗಳ ಗರಿಷ್ಠ ಬೆಲೆ ಸಮೀಪ ತಲುಪಿತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ. 589.45 ಆಗಿದೆ.

    ಮೂರು ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ ಶೇಕಡಾ 13.90 ರಷ್ಟು ಏರಿಕೆಯಾಗಿದೆ.

    ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಗೌತಮ್ ಅದಾನಿಯವರ ಮಧ್ಯಪ್ರದೇಶದ ವಿದ್ಯುತ್ ಯೋಜನೆಯಲ್ಲಿ 26 ಪ್ರತಿಶತ ಪಾಲನ್ನು ಪಡೆದುಕೊಳ್ಳುವ ಕುರಿತು ಘೋಷಿಸಿದ ನಂತರ ಈ ಷೇರು ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

    “ಮಹಾನ್ ಎನರ್ಜೆನ್ ಲಿಮಿಟೆಡ್, ಅದಾನಿ ಪವರ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯು 2005 ರ ವಿದ್ಯುತ್ ನಿಯಮಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಕ್ಯಾಪ್ಟಿವ್ ಯೂಸರ್ ನೀತಿಯ ಅಡಿಯಲ್ಲಿ RIL ನೊಂದಿಗೆ 500 MW ಗಾಗಿ 20 ವರ್ಷಗಳ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ” ಎಂದು ಅದಾನಿ ಪವರ್​ ಹೇಳಿದೆ.

    ಈ ಷೇರುಗಳ ಬೆಲೆ ಏರಿಕೆ ಕಾಣಲಿವೆ ಎಂದು ತಾಂತ್ರಿಕ ವಿಶ್ಲೇಷಕರು ಹೇಳಿದ್ದಾರೆ. “ಇತ್ತೀಚೆಗೆ ಷೇರುಗಳ ಬೆಲೆ ಬಲವಾದ ಪುನರುತ್ಥಾನವನ್ನು ಕಂಡಿದೆ. ಜೀವಿತಾವಧಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ” ಎಂದು ಏಂಜೆಲ್ ಒನ್‌ನ ತಾಂತ್ರಿಕ ಮತ್ತು ಉತ್ಪನ್ನಗಳ ಹಿರಿಯ ಸಂಶೋಧನಾ ವಿಶ್ಲೇಷಕ ಓಶೋ ಕ್ರಿಶನ್ ಹೇಳಿದ್ದಾರೆ.

    “560 ರೂ.ಗಳಲ್ಲಿ ಬಲವಾದ ಬೆಂಬಲದೊಂದಿಗೆ ದೈನಂದಿನ ಚಾರ್ಟ್‌ಗಳಲ್ಲಿ ಸ್ಟಾಕ್ ಬುಲಿಶ್ ಆಗಿ ಕಂಡುಬಂದಿದೆ. ರೂ. 590 ರ ಪ್ರತಿರೋಧದ ಮೇಲಿನ ದೈನಂದಿನ ಮುಕ್ತಾಯವು ಹತ್ತಿರದ ಅವಧಿಯಲ್ಲಿ ರೂ. 639 ರ ಏರಿಕೆಯ ಗುರಿಗೆ ಕಾರಣವಾಗಬಹುದು.” ಎಂದು ಟಿಪ್ಸ್2ಟ್ರೇಡ್ಸ್‌ನ ಎ.ಆರ್. ರಾಮಚಂದ್ರನ್ ಹೇಳಿದ್ದಾರೆ.

    ಪ್ರಭುದಾಸ್ ಲಿಲ್ಲಾಧರ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕ ಶಿಜು ಕೂತುಪಾಲಕ್ಕಲ್ ಅವರು, “ಕಳೆದ ನಾಲ್ಕು ತಿಂಗಳಿನಿಂದ ಸ್ಟಾಕ್ ಒಂದು ಶ್ರೇಣಿಯ ಚಲನೆಯಲ್ಲಿದೆ, ಪ್ರಸ್ತುತ ಕಳೆದ ಮೂರು ಸೆಷನ್‌ಗಳಲ್ಲಿ ಆವೇಗವನ್ನು ಪಡೆದುಕೊಂಡಿದೆ. ರೂ 590 ಗಡಿಯನ್ನು ದಾಟಿದರೆ, ರೂ 625 ಮತ್ತು 670 ವರೆಗೆ ಗುರಿ ಬೆಲೆಗಾಗಿ ಹೊಸ ಮೇಲ್ಮುಖ ಚಲನೆಯನ್ನು ನಿರೀಕ್ಷಿಸಬಹುದು” ಎಂದಿದ್ದಾರೆ.

    ರೆಲಿಗೇರ್ ಬ್ರೋಕಿಂಗ್‌ನ ಹಿರಿಯ ಉಪಾಧ್ಯಕ್ಷ (ರೀಟೇಲ್ ರಿಸರ್ಚ್) ರವಿ ಸಿಂಗ್, “ದೈನಂದಿನ ಚಾರ್ಟ್‌ಗಳಲ್ಲಿ ಸ್ಟಾಕ್ ಪ್ರಬಲವಾಗಿ ಕಾಣುತ್ತದೆ. ಇದು ರೂ 610 ರ ಸಮೀಪಾವಧಿಯ ಗುರಿಯನ್ನು ಮುಟ್ಟಬಹುದು. ಸ್ಟಾಪ್ ನಷ್ಟವನ್ನು ರೂ 575 ನಲ್ಲಿ ಇರಿಸಿಕೊಳ್ಳಿ.” ಎಂದಿದ್ದಾರೆ.

    ರೂ. 46ರಿಂದ 35 ಪೈಸೆಗೆ ಕುಸಿದಿದ್ದ ಷೇರು: ಒಂದು ವರ್ಷದಲ್ಲಿ 671% ಹೆಚ್ಚಳವಾಗಿ ಹೂಡಿಕೆದಾರಿಗೆ ಲಾಭದ ಸುರಿಮಳೆ

    ರೂ. 2,641ರಿಂದ 290ಕ್ಕೆ ಕುಸಿದ ರಿಲಯನ್ಸ್​ ಷೇರು: ಈಗ ಅನಿಲ್​ ಅಂಬಾನಿ ಕಂಪನಿಯ ಸ್ಟಾಕ್​ ಬೆಲೆ ಏರುತ್ತಿರುವುದೇಕೆ?

    ಮಂಗಳವಾರ ಅಪ್ಪರ್​ ಸರ್ಕ್ಯೂಟ್​ ಹಿಟ್ ಆದ ಸ್ಟಾಕ್​ಗಳು: ಬುಧವಾರ ಈ ಷೇರುಗಳಲ್ಲಿ ಲಾಭ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts