More

    ಚುನಾವಣೆಯಲ್ಲಿ ಸೋತಿರುವ ಅಣ್ಣಾಮಲೈರಿಂದ ಮಾರ್ಗದರ್ಶನ ಪಡೆಯುವ ಸ್ಥಿತಿಗೆ ಬಿಜೆಪಿ ಬಂದಿದೆ: ತೇಜಸ್ವಿನಿ ಗೌಡ

    ರಾಯಚೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎರಡನೇ ಹಂತದ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಲಿ ಉಳಿದಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ ತೇಜಸ್ವಿನಿ ಗೌಡ ಬಿಜೆಪಿ ಹಾಗೂ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಯಚೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾತನಾಡಿದ ಅವರು, ನಾನು ಮೋದಿಯನ್ನು ದ್ವೇಷಿಸುತ್ತಿಲ್ಲ. ಆದರೆ, ನನ್ನ ಪ್ರಕಾರ ದೇಶಕ್ಕೆ ಬಿಜೆಪಿ ಸೂಕ್ತವಾದ ಪಕ್ಷವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಅಭಿಮಾನಿ ಕೇಳುತ್ತಿದ್ದಂತೆ ಪರ್ಪಲ್​ ಕ್ಯಾಪ್​ ನೀಡಿದ ಬುಮ್ರಾ; ವಿಡಿಯೋ ವೈರಲ್​

    ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿ ತೇಜಸ್ವಿನಿ, ತಮಿಳುನಾಡಿನಲ್ಲಿ ಚುನಾವಣೆ ಸೋತಿರುವವರು ಮತ್ತು ಮೇಕೆದಾಟು ಯೋಜನೆಯನ್ನು ವಿರೋಧಿಸಿದವರು ಇಂದು ಕರ್ನಾಟಕದಲ್ಲಿ ಚುನಾವಣೆ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೇಕೆದಾಟು ವಿರೋಧಿಸಿದವರಿಂದ ಚುನಾವಣೆಯಲ್ಲಿ ಮಾರ್ಗದರ್ಶನ ಪಡೆಯುವ ಪರಿಸ್ಥಿತಿಗೆ ರಾಜ್ಯ ಬಿಜೆಪಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಅಣ್ಣಾಮಲೈ ಯಾವ ದೊಡ್ಡ ನಾಯಕ ಎಂದು ನನಗೆ ಅರ್ಥವಾಗುತ್ತಿಲ್ಲ.  ಜನನಾಯಕರು ಜನರಿಂದ ಹುಟ್ಟಿಬರುತ್ತಾರೆ. ಹೀಗೇ ಮೇಲಿಂದ ಕ್ರಿಯೇಟ್ ಆಗುವುದಿಲ್ಲ. ಅಣ್ಣಾಮಲೈ ಕರ್ನಾಟಕದಲ್ಲಿ ಆಫೀಸರ್ ಆಗಿದ್ರೂ ಅಲ್ಲಿಗೆ ಹೋಗಿ ನಂಗೆ ಕನ್ನಡ ಗೊತ್ತಿಲ್ಲ, ಅದು ಗೊತ್ತಿಲ್ಲ, ಇದು ಗೊತ್ತಿಲ್ಲ ಅಂತಾರೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಮಾಜಿ ವಿಧಾನಪರಿಷತ್​ ಸದ್ಸಯ ತೇಜಸ್ವಿನಿ ಗೌಡ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts