ಮತ್ತೆ ಮತ್ತೆ ಭೂಕಂಪ: ವಿಜಯಪುರ ಜನತೆಯಲ್ಲಿ ಕಡಿಮೆಯಾಗದ ಆತಂಕ..

earthquake
Published on

ವಿಜಯಪುರ: ಕಳೆದ ಎರಡು ಮೂರು ದಿನಗಳಿಂದ ಸದ್ದು ಮಾಡುತ್ತಿರುವ ಭೂಕಂಪನದಿಂದಾಗಿ ವಿಜಯಪುರ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲಿ ಇಂದು ಕೂಡ ಭೂಕಂಪನ ಉಂಟಾಗಿದ್ದು, ಈಗಾಗಲೇ ಆತಂಕದಲ್ಲಿರುವ ಜನರಲ್ಲಿನ ನಡುಕವನ್ನು ಹೆಚ್ಚಿಸಿದೆ.

ಸೋಮವಾರ ಸಂಜೆ 4.26ರ ಸುಮಾರಿಗೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿದೆ. ಭೂಮಿಯ 10 ಕಿಲೋಮೀಟರ್​ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡಳಿತ ವರದಿ ನೀಡಿದೆ.

ಆ.20ರಂದು ಸಂಜೆ 8.16 ರ ಸುಮಾರಿಗೆ 3.5ರಷ್ಟು ತೀವ್ರತೆ ದಾಖಲಾಗಿತ್ತು. ಆ. 21ರಂದು ಸಹ ಭೂಮಿ ಕಂಪಿಸಿದ್ದು 3.1ರಷ್ಟು ತೀವ್ರತೆ ದಾಖಲಾಗಿತ್ತು. ಅಲ್ಲದೆ, ಕಳೆದ ತಿಂಗಳಲ್ಲಿ ಕೂಡ ಕಂಪನ ಉಂಟಾಗಿತ್ತು. ಮಾತ್ರವಲ್ಲ, 9 ತಿಂಗಳ ಹಿಂದೆಯೂ ಮತ್ತೆ ಮತ್ತೆ ಭೂಕಂಪ ಸಂಭವಿಸಿತ್ತು. ಹೀಗೆ ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಜನರು ಆತಂಕದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net