More

    ವಿಜಯಪುರದಲ್ಲಿ ಮತ್ತೆ ಭೂಕಂಪ; ಜನರಲ್ಲಿ ಮರುಕಳಿಸಿದ ಆತಂಕ..

    ವಿಜಯಪುರ: ಒಂಬತ್ತು ತಿಂಗಳ ಹಿಂದೆ ಪದೇಪದೆ ಭೂಕಂಪಕ್ಕೆ ಒಳಗಾಗಿದ್ದ ವಿಜಯಪುರದಲ್ಲಿ ಕಳೆದ ತಿಂಗಳಲ್ಲಿ ಪುನಃ ಭೂಕಂಪವಾಗಿತ್ತು. ಇದೀಗ ಮತ್ತೆ ಭೂಕಂಪನ ಉಂಟಾಗಿದ್ದು, ಈ ಪ್ರದೇಶದ ಜನರಲ್ಲಿ ಆತಂಕ ಮರುಕಳಿಸಿದೆ. ಭೂ ಕಂಪನದ ಅನುಭವಕ್ಕೆ ಬೆಚ್ಚಿದ ಜನರು ಹೊರಗೆ ಓಡಿಬಂದ ಸನ್ನಿವೇಶವೂ ಕಂಡುಬಂದಿತ್ತು.

    ವಿಜಯಪುರ ನಗರದ ರೇಲ್ವೇ ಸ್ಟೇಷನ್, ರಂಭಾಪೂರ ಆಶ್ರಮ‌, ಅಶುತೋಶಿ ನಗರ, ಗ್ಯಾಂಗ್ ಬೌಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪದ ಅನುಭವವಾಗಿದೆ ಎಂದು ಜನರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇಂದು ರಾತ್ರಿ 8.15 ನಿಮಿಷ ಸುಮಾರಿಗೆ ಇಲ್ಲಿ ಭೂಕಂಪನದ ಅನುಭವ ಆಗಿದೆ.

    ಶನಿವಾರ ಸಂಜೆ 8.16 ರ ಸುಮಾರಿಗೆ ಭೂಮಿ ಕಂಪಿಸಿದ್ದು ಆಲಮಟ್ಟಿಯ ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲಾಗಿದೆ. ವಿಜಯಪುರ ನಗರದ ಬಹುತೇಕ ಬಡಾವಣೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪನದ ಕೇಂದ್ರ ಬಿಂದು ಮಹಾರಾಷ್ಟ್ರದಲ್ಲಿ ಕಂಡು ಬಂದಿದ್ದು, ಅಂದಾಜು 5 ಕಿ.ಮೀ. ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದೆ.

    ಕಳೆದ ತಿಂಗಳು ಜುಲೈ 9ರಂದು ಭಾರಿ ಸದ್ದಿನೊಂದಿಗೆ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲೂ ಭೂಕಂಪನದ ತೀವ್ರತೆ ದಾಖಲಾಗಿತ್ತು. ಜುಲೈ 9ರ ಬೆಳಗ್ಗೆ 6.22 ಹಾಗೂ 6.24 ಕ್ಕೆ‌ ಎರಡು ಸಲ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ 6 ಗಂಟೆ 22 ನಿಮಿಷಕ್ಕೆ 4.9, 6 ಗಂಟೆ 24 ನಿಮಿಷಕ್ಕೆ 4.6 ತೀವ್ರತೆ ದಾಖಲಾಗಿತ್ತು. ಕಳೆದ ವರ್ಷ ಅಕ್ಟೋಬರ್​, ನವೆಂಬರ್ ತಿಂಗಳಲ್ಲೂ ಇಲ್ಲಿ ಪದೇಪದೆ ಭೂಕಂಪ ಉಂಟಾಗಿತ್ತು.

    ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..

    ಭೂಕಂಪ: ಕಾರಣ, ಪರಿಣಾಮ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರೊಂದಿಗೆ ಸಂವಾದ – ವಿಜಯವಾಣಿ ಕ್ಲಬ್​ಹೌಸ್​ನಲ್ಲಿ

    ರಾಜ್ಯದಲ್ಲಿ ಪದೇಪದೆ ಭೂಕಂಪವಾಗುತ್ತಿರುವ ಇಲ್ಲಿ ಇಂದು ಮತ್ತೆರಡು ಸಲ ಕಂಪಿಸಿದ ಭೂಮಿ; ಹಬ್ಬದ ಸಂಭ್ರಮದ ಬೆನ್ನಿಗೇ ಜನರಲ್ಲಿ ಆತಂಕ

    ಇಲ್ಲಿ ಪುನಃ ಭೂಕಂಪ; ಭಾರಿ ಸದ್ದಿಗೆ ಶಾಲೆಯಿಂದ ಹೊರಗೆ ಓಡೋಡಿ ಬಂದ ಮಕ್ಕಳು-ಶಿಕ್ಷಕರು!

    ಇಲ್ಲಿ ಇಂದು ಮತ್ತೆ ಭೂಕಂಪ!; ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಕಂಗೆಟ್ಟಿರುವ ಜನತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts