More

    ವಿಜಯಪುರ ಜಿಲ್ಲೆಯಾದ್ಯಂತ ಮತ್ತೆ ಕಂಪಿಸಿದ ಭೂಮಿ: ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಸವಿನಿದ್ದೆಯಲ್ಲಿದ್ದ ಜನರು

    ವಿಜಯಪುರ: ಗುಮ್ಮಟನಗರಿ ವಿಜಯಪುರ ಜಿಲ್ಲೆಯಾದ್ಯಂತ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು (ಜುಲೈ 9) ಬೆಳ್ಳಂಬೆಳಗ್ಗೆ ಭಾರೀ ಶಬ್ದದೊಂದಿಗೆ 3 ರಿಂದ 4 ಸೆಕೆಂಡ್​ಗಳ‌ ಕಾಲ ಭೂಮಿ ಕಂಪಿಸಿದ್ದು, ವಿಜಯಪುರದ ಜನತೆ ಭಯಭೀತರಾಗಿದ್ದಾರೆ.

    ಕಳೆದ ಮೂವತ್ತು ವರ್ಷದ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಸದ್ದು ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ. ವಿಜಯಪುರದ ನಗರದ ರೇಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮ ಏರಿಯಾ, ಗ್ಯಾಂಗಬಾವಡಿ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದೆ.

    ವಿಜಯಪುರ ನಗರ ಕೇಂದ್ರದಲ್ಲಿ ಮಾತ್ರವಲ್ಲದೆ, ಜಿಲ್ಲೆಯಾದ್ಯಂತ ಹಲವೆಡೆ ಭೂಕಂಪನ ಅನುಭವವಾಗಿದೆ. ವಿಜಯಪುರ, ತಿಕೋಟಾ, ಬಬಲೇಶ್ವರ, ಇಂಡಿ ಹಾಗೂ ಚಡಚಣ ತಾಲೂಕುಗಳು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಭೂಮಿ ನಡುಗಿದೆ.

    ಜಿಟಿಜಿಟಿ ಮಳೆಯ ಕಿರಿಕಿರಿ ಒಂದುಕಡೆಯಾದರೆ, ಪದೇಪದೆ ಸಂಭವಿಸುತ್ತಿರುವ ಭೂಕಂಪನದಿಂದಾಗಿ ಗುಮ್ಮಟ ನಗರಿಯ ಜನತೆ ಆತಂಕಕ್ಕೀಡಾಗಿದ್ದಾರೆ. ರಾಜ್ಯಾದ್ಯಂತ ಕಳೆದ ರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದೇ ಸಂದರ್ಭದಲ್ಲಿ ಭೂಕಂಪನವಾಗಿದ್ದು, ಸವಿನಿದ್ದೆಯಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಾರಿಗೆ ಮೇಲೆತ್ತಲು ತಂತ್ರ: ನಿಗಮಗಳ ಒಟ್ಟಾರೆ ನಷ್ಟ 4,500 ಕೋಟಿ ರೂ.; ಆಸ್ತಿ ನಗದೀಕರಣಕ್ಕೆ ಸಿಎಂ ಸೂಚನೆ

    ಶಕ್ತಿಸೌಧದಲ್ಲೇ ತುಂಡುಗುತ್ತಿಗೆ!; ರಾಜಭವನ ವಿದ್ಯುತ್ ಕಾಮಗಾರಿಯಲ್ಲೂ ಅಧಿಕಾರಿಗಳ ಕೈಚಳಕ..

    ಪೃಥ್ವಿಗೆ ಅಯಾನಾ ನಾಯಕಿ; ದೂರದರ್ಶನ ಚಿತ್ರೀಕರಣ ಮುಕ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts