ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಸಲಿಂಗಕಾಮ, ವ್ಯಭಿಚಾರ: ಸಮಿತಿಯ ಸಲಹೆಗಳಿಗೆ ಪ್ರಧಾನಿ, ಕೇಂದ್ರ ಕ್ಯಾಬಿನೆಟ್​ ಅಸಮ್ಮತಿ

2 Min Read
ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಸಲಿಂಗಕಾಮ, ವ್ಯಭಿಚಾರ: ಸಮಿತಿಯ ಸಲಹೆಗಳಿಗೆ ಪ್ರಧಾನಿ, ಕೇಂದ್ರ ಕ್ಯಾಬಿನೆಟ್​ ಅಸಮ್ಮತಿ

ನವದೆಹಲಿ: ಹಳೆಯ ವಸಾಹತುಶಾಹಿ ಪೂರ್ವ ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಸಿದ್ಧವಾಗಿರುವ ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆಗಳನ್ನು ಮಂಡಿಸಲು ಕೇಂದ್ರ ಸಂಪುಟವು ಗೃಹ ಸಚಿವ ಅಮಿತ್ ಶಾ ಅವರಿಗೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಆದರೆ, ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದ ಎರಡು ಸಲಹೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಅವರ ಕಚೇರಿ (ಪಿಎಂಒ) ಹಾಗೂ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿಲ್ಲ. ಇವು ದೂರಗಾಮಿ ಪರಿಣಾಮಗಳನ್ನು ಹೊಂದಿದ್ದು, ಸುಪ್ರೀಂ ಕೋರ್ಟ್ ಮತ್ತು ಅದರ ತೀರ್ಪುಗಳಿಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ಒಪ್ಪಿಗೆ ನೀಡಲಾಗಿಲ್ಲ.

ಈ ಎರಡು ಸಲಹೆಗಳ ಪೈಕಿ ಒಂದು ವ್ಯಭಿಚಾರದ ಅಪರಾಧಕ್ಕೆ ಸಂಬಂಧಿಸಿದ್ದಾಗಿದ್ದರೆ, ಇನ್ನೊಂದು ಸಲಿಂಗ ಕಾಮವನ್ನು ಅಪರಾಧ ಎಂದು ಪರಿಣಿಸುವುದಾಗಿದೆ.

2023ರ ಭಾರತೀಯ ನ್ಯಾಯ ಸಂಹಿತಾ ಮಸೂದೆಯಲ್ಲಿ ವ್ಯಭಿಚಾರದ ಅಪರಾಧವನ್ನು ಉಳಿಸಿಕೊಳ್ಳಬೇಕೆಂದು ಸಮಿತಿಯು ಶಿಫಾರಸು ಮಾಡಿತ್ತು. ಆದರೆ, 2018 ರಲ್ಲಿ ಸುಪ್ರೀಂ ಕೋರ್ಟ್ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವುದನ್ನು ತಳ್ಳಿಹಾಕಿದೆ, ಇದು ಮಹಿಳೆಯರ ವಿರುದ್ಧದ ತಾರತಮ್ಯ, ಲಿಂಗ ಪರಿಕಲ್ಪನೆಗೆ ಆಸ್ಪದ ಮತ್ತು ಮಹಿಳೆಯರ ಘನತೆ ಕುಗ್ಗಿಸುತ್ತದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377 ರ ಅಡಿಯಲ್ಲಿ ಒಮ್ಮತವಿಲ್ಲದ ಕಾರ್ಯಗಳಿಗೆ ದಂಡ ವಿಧಿಸುವುದು ಸ್ಥಾಯಿ ಸಮಿತಿಯ ಮತ್ತೊಂದು ಶಿಫಾರಸು ಆಗಿದೆ. ವಯಸ್ಕರ ನಡುವಿನ ಒಪ್ಪಿತ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವುದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೂ ಹೊಸ ಮಸೂದೆಯಲ್ಲಿ ಈ ನಿಬಂಧನೆಯನ್ನು ಉಳಿಸಿಕೊಳ್ಳಲು ಸ್ಥಾಯಿ ಸಮಿತಿ ಸಲಹೆ ನೀಡಿತ್ತು. ಪುರುಷ, ಮಹಿಳೆ, ತೃತೀಯಲಿಂಗಿ ಮತ್ತು ಪ್ರಾಣಿಗಳ ವಿರುದ್ಧ ಸಮ್ಮತಿಯಿಲ್ಲದ ಲೈಂಗಿಕ ಅಪರಾಧಕ್ಕೆ ಯಾವುದೇ ನಿಬಂಧನೆ ಇಲ್ಲ ಎಂದು ಸಮಿತಿ ಹೇಳಿತ್ತು.

See also  ಶಾಲೆಗೆ ಹೊಸ ರೂಪ ನೀಡಿದ ಶಿಕ್ಷಕ ವೃಂದ

ಆದರೆ, ಈ ಎರಡೂ ಶಿಫಾರಸುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ, ಅವರ ಕಚೇರಿ (ಪಿಎಂಒ) ಮತ್ತು ಕೇಂದ್ರ ಸಂಪುಟ ತಿಳಿಸಿದೆ.

ವ್ಯಭಿಚಾರದ ಅಪರಾಧದಲ್ಲಿ, ಮಹಿಳೆಯ ಸ್ವಾಯತ್ತತೆಯನ್ನು ಕಡೆಗಣಿಸಿ ಪುರುಷನಿಗೆ ಮಾತ್ರ ದಂಡ ವಿಧಿಸುವ ಮೂಲಕ ಹೆಂಡತಿಯನ್ನು ಗಂಡನ ಆಸ್ತಿಯಂತೆ ಪರಿಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆದರೆ, ಮದುವೆಯನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು, ಭಾರತೀಯ ಸಮಾಜದಲ್ಲಿ ಇದನ್ನು ರಕ್ಷಿಸಬೇಕು. ಅಲ್ಲದೆ, ಲಿಂಗ-ತಟಸ್ಥಗೊಳಿಸಬೇಕು ಎಂದು ಸಂಸದೀಯ ಸಮಿತಿಯು ಅಭಿಪ್ರಾಯಪಟ್ಟಿದೆ. ಈ ಶಿಫಾರಸನ್ನು ಒಪ್ಪಿಕೊಳ್ಳದಿರುವ ನಿರ್ಧಾರವನ್ನು ಪಿಎಂಒ, ಪ್ರಧಾನಿ ಮತ್ತು ಸಚಿವ ಸಂಪುಟ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ವ್ಯಾಖ್ಯಾನವನ್ನು 21 ನೇ ಶತಮಾನಕ್ಕೆ ಅನುಗುಣವಾಗಿ ಇರುವಂತೆ ಮಾಡಲು ಕೆಲವು ಬದಲಾವಣೆಗಳನ್ನು ಮಸೂದೆಯಲ್ಲಿ ಮಾಡಲಾಗಿದೆ. ಈ ಎಲ್ಲಾ ಮೂರು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಬುಧವಾರ ಮಂಡಿಸಿ, ಮುಂದಿನ ವಾರದಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ.

ಮಧ್ಯಪ್ರದೇಶ ನೂತನ ಸಿಎಂ ಮೋಹನ್​ ಯಾದವ್​; ಜಗದೀಶ್ ದಿಯೋರಾ, ರಾಜೇಶ್ ಶುಕ್ಲಾ ಡಿಸಿಎಂ; ನರೇಂದ್ರ ಸಿಂಗ್ ತೋಮರ್ ಸ್ಪೀಕರ್​

ಮಧ್ಯಪ್ರದೇಶದ ಸಿಎಂ ಯಾರು? ಭೋಪಾಲ್​ನಲ್ಲಿ ಶಾಸಕರ ಸಭೆ ನಡೆಸುತ್ತಿದ್ದಾರೆ ಕೇಂದ್ರ ವೀಕ್ಷಕರು

370ನೇ ವಿಧಿ ರದ್ದತಿ ಕುರಿತ ತೀರ್ಪಿನ ಮೊದಲೇ ಎಕ್ಸ್​ನಲ್ಲಿ ವಿವಾದಾತ್ಮಕ ಪೋಸ್ಟ್​: ಸೋಲುವುದಕ್ಕಾಗಿಯೇ ವಾದ ಮಂಡಿಸಿದ್ದರೆ ಕಪಿಲ್​ ಸಿಬಲ್​?

Share This Article